Gram Panchayat System . ನಿಮ್ಮ ಊರಿನಲ್ಲಿರುವ ಗ್ರಾಮ ಪಂಚಾಯಿತಿ ಅದರಲ್ಲಿ ನಡೆಯುವ ಕಾರ್ಯಕ್ರಮಗಳು ಅನುದಾನಗಳ ಬಗ್ಗೆ ನಿಮಗೆಷ್ಟು ಗೊತ್ತು..?
ಸಾಮಾನ್ಯವಾಗಿ ಒಂದು ಗ್ರಾಮ ಪಂಚಾಯಿತಿಯಲ್ಲಿ ಸುಮಾರು 5 ರಿಂದ 10 ಹಳ್ಳಿಗಳು ಇರುತ್ತವೆ , ಇಷ್ಟು ಚಿಕ್ಕದಾಗಿ ಪಂಚಾಯಿತಿಗಳನ್ನ ನಿರ್ಮಾಣ ಮಾಡಿದ್ದರೂ ಸಹ ಪ್ರತಿ ಹಳ್ಳಿಗೆ ಸರಿಯಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ,ಪಾರದರ್ಶಕವಾದ ಆಡಳಿತವನ್ನು ಮಾಡುವುದರಲ್ಲಿ ಇನ್ನೂ ನಾವು ತುಂಬಾ ಸಾಧಿಸಬೇಕಾಗಿದೆ ,ಒಂದು ಗ್ರಾಮ ಪಂಚಾಯಿತಿಯಲ್ಲಿ 12 ರಿಂದ 30 ವಾರ್ಡ್ಗಳು ಇರುತ್ತೆ ಒಂದು ವಾರ್ಡ್ ಗೆ ಒಂದರಿಂದ ನಾಲ್ಕು ಚುನಾಯಿತ ಪ್ರತಿನಿಧಿಗಳನ್ನ ಆಯ್ಕೆ ಮಾಡುತ್ತಾರೆ ಇನ್ನು ಪ್ರತಿ ವಾರ್ಡ್ನಲ್ಲಿರುವ ಮತದಾರರ ಸಂಖ್ಯೆ 1000ದವರೆಗೆ ಇರುತ್ತೆ ಇನ್ನು ಪ್ರತಿ ವಾರ್ಡ್ನಲ್ಲಿ ಇರುವ ಮನೆಗಳ ಸಂಖ್ಯೆ 100ರಿಂದ 300ರವರೆಗೆ ಇರಬಹುದು.
ಪ್ರತಿ ಗ್ರಾಮದ ಅಥವಾ ವಾರ್ಡಿನ ಸದಸ್ಯರು ಏನು ಮಾಡಬಹುದು
ಪ್ರಪ್ರತಿ ಗ್ರಾಮದ ಅಥವಾ ವಾರ್ಡಿನ ಸದಸ್ಯರ ಮುಖ್ಯ ಕರ್ತವ್ಯ ನಿರಂತರ ಸಂಪರ್ಕ ಸಾಧಿಸುವುದು ,ತನ್ನ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಕುಂದು ಕೊರತೆಗಳನ್ನ ಪಟ್ಟಿ ಮಾಡಬೇಕು ತನ್ನ ವ್ಯಾಪ್ತಿಗೆ ಬರುವ ಸರ್ಕಾರಿ ಆಸ್ತಿಗಳಾದ ಶಾಲೆ , ಕಾಲೇಜು ಕೆರೆ, ಕುಂಟೆ, ನದಿ ಅರಣ್ಯ ರಾಜ ಕಾಲುವೆ ಎಲ್ಲವನ್ನು ರಕ್ಷಣೆ ಮಾಡಬೇಕು ಅವುಗಳ ರಕ್ಷಣೆಗೆ ಬರಬೇಕಾದ ಕೆಲಸ ಕಾರ್ಯಗಳ ಬಗ್ಗೆ ಪಟ್ಟಿ ಮಾಡಬೇಕು ,ಇನ್ನೂ ಒಂದು ವಾರ್ಡಿನಲ್ಲಿ 3 ರಿಂದ 4 ಜನ ಸದಸ್ಯರು ಇರುತ್ತಾರೆ ಅವರು ತಮ್ಮ ವಾರ್ಡನ್ನ ವಿಂಗಡಣೆ ಮಾಡಿಕೊಂಡು ,ತಮ್ಮ ಜವಾಬ್ದಾರಿಯನ್ನ ನಿರ್ಧರಿಸಬೇಕು .
ತಮ್ಮ ಏರಿಯಾದಲ್ಲಿರುವ ಮನೆಗಳಿಗೆ ಭೇಟಿಕೊಟ್ಟು ಪ್ರತಿಯೊಬ್ಬರಿಗೂ ತಮ್ಮ ಮೊಬೈಲ್ ಸಂಖ್ಯೆಯನ್ನು ತಿಳಿಸಬೇಕು ,ಹಾಗೂ ಅವರ ಸಮಸ್ಯೆಯನ್ನ ಪ್ರತಿನಿಧಿಗೆ ತಿಳಿಸುವಂತಿರಬೇಕು , ಈಗ ಟೆಕ್ನಾಲಜಿ ಅನ್ನೋದು ತುಂಬಾ ಮುಂದುವರೆದಿದೆ ಆದ್ದರಿಂದ ನಿಮ್ಮ ವಾರ್ಡಿಗೆ ಸಂಬಂಧಪಟ್ಟ ಒಂದು ವಾಟ್ಸಾಪ್ ಗ್ರೂಪ್ ಮಾಡಿ ವಾರ್ಡ್ನಲ್ಲಿ ಬರುವ ಪ್ರತಿ ಸಮಸ್ಯೆಯನ್ನ ಅದರಲ್ಲಿ ಶೇರ್ ಮಾಡಿಕೊಳ್ಳಬೇಕು .
ಗ್ರಾಮದ ಸದಸ್ಯರು ಗ್ರಾಮ ಪಂಚಾಯಿತಿಗೆ ಬರುವ ಅನುದಾನಗಳನ್ನ ಪ್ರಜೆಗಳಿಗೂ ತಿಳಿಸಬಹುದು .ಅದೇ ರೀತಿ ಸಭೆಯಲ್ಲಿ ಆದ ನಿರ್ಧಾರಗಳನ್ನು ಪ್ರಜೆಗಳಿಗೆ ತಿಳಿಸಬಹುದು . ಈ ರೀತಿ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ವಿಷಯಗಳು ಜನರಿಗೆ ತಿಳಿಸಿ , ಜನರು ಕೂಡ ಗ್ರಾಮ ಪಂಚಾಯಿತಿ ಅಭಿವೃದ್ಧಿಯಲ್ಲಿ ಭಾಗವಹಿಸುವಂತೆ ಮಾಡಬೇಕು , ಆಗ ಪಾರದರ್ಶಕ ಆಡಳಿತ ಕಾಣುತ್ತದೆ.
ಪಂಚಾಯಿತಿ ಅಭಿವೃದ್ಧಿಯಲ್ಲಿ PDO ಪಾತ್ರ ತುಂಬಾ ಮುಖ್ಯವಾಗಿದೆ. ಇವರು ಚುನಾಯಿತ ಪ್ರತಿನಿಧಿಗಳು ಬಹುಮತದಿಂದ ಒಪ್ಪಿದ ಕೆಲಸವನ್ನೇ ಮಾಡಬೇಕಾಗುವುದು . ಅದೇ ರೀತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಅಥವಾ ಉಪಾಧ್ಯಕ್ಷರು ಮತ್ತು ಪಿಡಿಓ ಅವರು ಹಣದ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ .
ಪಂಚಾಯಿತಿಗೆ ಯಾವ ಯಾವ ಮೂಲಗಳಿಂದ ಹಣ ಬರುತ್ತೆ
ಸಾಮಾನ್ಯವಾಗಿ ಗ್ರಾಮ ಪಂಚಾಯಿತಿಗಳಿಗೆ ನಾಲ್ಕು ಮೂಲಗಳಿಂದ ಹಣ ಬರುತ್ತೆ
1) ಕೇಂದ್ರ ಆಯೋಗದ ಹಣಕಾಸು ಅನುದಾನ
2) ರಾಜ್ಯದ ಶಾಸನಬದ್ಧ ಅನುದಾನ
3) ಗ್ರಾಮ ಪಂಚಾಯಿತಿ ಸ್ವಂತ ಆದಾಯ
4) ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅನುದಾನ
ನಿಮ್ಮ ಪಂಚಾಯತಿಯಲ್ಲಿ ನಿಮಗೆ ದೊರೆಯುವುದು ಸೌಲಭ್ಯಗಳನ್ನು ನೀವೇ ತಿಳಿಯಿರಿ. ಅದಕ್ಕಾಗಿ “ಈ ಗ್ರಾಮ ಸ್ವರಾಜ್” ಆಫ್ ಸಹ ನಿಮಗೆ ಸಹಕಾರಿಯಾಗಬಲ್ಲದು. ಸರ್ಕಾರವೇ ರೂಪಿಸಿರುವ ಪಂಚಾಯತ್ ರಾಜ್ ವೆಬ್ ಸೈಟ್ ನೋಡಬಹುದು.
Good
ಪ್ರತ್ಯುತ್ತರಅಳಿಸಿGood
ಪ್ರತ್ಯುತ್ತರಅಳಿಸಿGood
ಪ್ರತ್ಯುತ್ತರಅಳಿಸಿಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ತುದೇಕೊಪ್ಪ ಊರಿಗೆ ರಸ್ತೆ,ನೀರು ವ್ಯವಸ್ಥೆ ಇಲ್ಲ. PDO ಗಳಿಗೆ ಲಿಖಿತವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ..ರಸ್ತೆ ಸಂಪರ್ಕ ಸಂಪೂರ್ಣ ಹದಗೆಟ್ಟಿದೆ. ದಯವಿಟ್ಟು ಸರಿಪಡಿಸಲು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ.
ಪ್ರತ್ಯುತ್ತರಅಳಿಸಿಕಾಮೆಂಟ್ ಪೋಸ್ಟ್ ಮಾಡಿ