ಭೂಮಿ ಕರ್ನಾಟಕ 2025 : ಆನ್ಲೈನ್ನಲ್ಲಿ ಕರ್ನಾಟಕ ಭೂ ದಾಖಲೆಗಳನ್ನು ಚೆಕ್ ಮಾಡುವುದು ಹೇಗೆ
ಭೂಮಿ ಕರ್ನಾಟಕ ಅಂದರೆ ಏನು?
ನಿಮ್ಮ ಭೂಮಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಸಿಗುವ ಕರ್ನಾಟಕ ಸರ್ಕಾರದ ಅಧಿಕೃತ ಭೂ ದಾಖಲೆಗಳ ಪೋರ್ಟಲ್. ಮಾಡ್ರನ್ ಟೆಕ್ನಾಲಜಿ ಯೊಂದಿಗೆ, ಭೂಮಿ RTC, MR, Mutation status, Khata extract, Survey document, ಈ ರೀತಿ ನಿಮ್ಮ ಭೂಮಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಆನ್ಲೈನ್ನಲ್ಲಿ ಸಕ್ರಿಯಗೊಳಿಸುತ್ತದೆ. ಭೂಮಿ ಕರ್ನಾಟಕ ಅಥವಾ ಕರ್ನಾಟಕ ಭೂ ದಾಖಲೆಗಳ ಪೋರ್ಟಲ್ (ಭೂಮಿ ಆನ್ಲೈನ್) ಅನ್ನು 2000 ಇಸವಿಯಲ್ಲಿ ಪ್ರಾರಂಭಿಸಲಾಯಿತು. ಭೂಮಿ ಕರ್ನಾಟಕ ಪೋರ್ಟಲ್ನ ಅಧಿಕೃತ ವೆಬ್ಸೈಟ್ https://landrecords.karnataka.gov.in/ (Bhoomi Karnataka gov in).
ಕರ್ನಾಟಕ ರಾಜ್ಯದ ಭೂ ದಾಖಲೆಗಳಿಗಾಗಿ ಭೂಮಿ ಕರ್ನಾಟಕ ಆನ್ಲೈನ್ ಪೋರ್ಟಲ್
ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳ ಜನರು ತಮ್ಮ ಜಮೀನಿಗೆ ಸಂಬಂಧಪಟ್ಟ ಎಲ್ಲಾ ರೀತಿಯ ಭೂ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಭೂಮಿ ಕರ್ನಾಟಕ (Bhoomi online) ಆನ್ಲೈನ್ ಪೋರ್ಟಲ್ ನಲ್ಲಿ ನೋಡಬಹುದು, ಅದೇ ರೀತಿ ಕರ್ನಾಟಕ ಸರ್ಕಾರ ಭೂತಾಪನೆಗಳಿಗೆ ಸಂಬಂಧಪಟ್ಟ ಕಚೇರಿಗಳನ್ನು ರಾಜ್ಯದ್ಯಂತ ಸ್ಥಾಪಿಸಿದೆ, ಭೂ ದಾಖಲೆಗಳಿಗೆ ಸಂಬಂಧಪಟ್ಟ ಸೇವೆಗಳನ್ನು ಒದಗಿಸಲು ರಾಜ್ಯದಾದ್ಯಂತ 6000 ಗ್ರಾಮ ಪಂಚಾಯಿತಿಗಳು ಇವೆ, ಭೂ ದಾಖಲೆಗಳನ್ನು ಆನ್ಲೈನಲ್ಲಿ ನೋಡುವ ಸೌಲಭ್ಯವನ್ನು ಇದು ಒದಗಿಸುತ್ತೆ, ಭೂ ದಾಖಲೆಗಳ ನಿರ್ವಹಣೆಗೆ ಇದು ಅತ್ಯುತ್ತಮ ಸಾಧನವಾಗಿದೆ.
ಭೂಮಿ ಕರ್ನಾಟಕ ಪೋರ್ಟಲ್ ನಲ್ಲಿ ಒದಗಿಸಲಾದ ಸೇವೆಗಳು
ಭೂ ದಾಖಲೆಗಳ ನಿರ್ವಹಣೆಗಾಗಿ ನಿರ್ಮಿಸಿರುವ ಕರ್ನಾಟಕ ಲ್ಯಾಂಡ್ ರೆಕಾರ್ಡ್ಸ್ ಪೋರ್ಟಲ್ ಸಾರ್ವಜನಿಕರಿಗೆ ಈ ಕೆಳಗಿನ ಸೇವೆಗಳನ್ನು ಒದಗಿಸುತ್ತೆ.
- RTC & MR ವೀಕ್ಷಣೆ
- ಖಾತಾ ಪ್ರತಿ ವೀಕ್ಷಣೆ
- ಆರ್ ಟಿ ಸಿ ಮಾಹಿತಿ ವೀಕ್ಷಣೆ
- ಐ- ಆರ್ ಟಿ ಸಿ
- ಭೂಮಿ ವಿವಾದಾಸ್ಪದ ಪ್ರಕರಣಗಳು
- ಗ್ರಾಮಾವಾರು ಮ್ಯುಟೇಶನ್ ಬಾಕಿ ವಿವರಗಳು
- ಭೂಮಿ ಆರ್ ಟಿಸಿ ಮ್ಯುಟೇಶನ್ ಹಿಸ್ಟರ
- ಬಗೈರ್ ಹುಕುಂ ವರದಿಗಳು
- ಆಧಾರ್ ಸೀಡಿಂಗ್ ವರದಿಗಳು
- ಲ್ಯಾಂಡ್ ಬೀಟ್ ವರದಿಗಳು
- ಫಾರ್ಮ್ 57 ರ ಅಡಿಯಲ್ಲಿ ಸ್ವೀಕರಿಸಿದ ಅರ್ಜಿಗಳ ವಿವರಗಳು
- ಭೂಪರಿವರ್ತನೆ ವಿಲೇವಾರಿ ವರದಿ
- ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿ
- ಭೂಪರಿವರ್ತನೆ ಅರ್ಜಿ ಸ್ಥಿತಿ ತಿಳಿಯಿರಿ
- ಭೂಪರಿವರ್ತನೆಯ ಅಂತಿಮ ಆದೇಶ ಪ್ರತಿಯನ್ನು ಡೌನ್ ಲೋಡ್ ಮಾಡಿ
- ಸರ್ವೇ ದಾಖಲೆಗಳ ವೀಕ್ಷಣೆ
- ಸರ್ವೆ ದಾಖಲೆಗಾಗಿ ಕೋರಿಕೆ
- ಕಂದಾಯ ನಕ್ಷೆಗಳು
- ನಾಗರೀಕರ ನೋಂದಣಿ
- ಆರ್ ಟಿ ಸಿ ಎಕ್ಷ್ ಎಂ ಎಲ್ ಪರಿಶೀಲನೆ
- ಭೂಮಿ ಆನ್ ಲೈನ್ ಮ್ಯುಟೇಶನ್ ಸೇವೆಗಳು
- ಇ ಒ ಡಿ ಬಿ ಸೇವೆಗಳು
- ಬೆಳೆ ಸಾಲ ಮನ್ನಾ ಯೋಜನೆ ವ್ಯವಸ್ಥೆ
- ಮ್ಯುಟೇಶನ್ ರಿಜಿಸ್ಟರ್
- ಟಿಪ್ಪನ್ ಸೇವೆಗಳು
- ಆದಾಯ ನಕ್ಷೆಗಳನ್ನು ವೀಕ್ಷಿಸಲಾಗುತ್ತಿದೆ
- ನಾಗರಿಕರ ನೋಂದಣಿಗೆ ಅನುಕೂಲ
- ಭೂಮಿ ನಾಗರಿಕ ಲಾಗಿನ್
- RTC ಯ XML ಪರಿಶೀಲನೆ
- ವಿವಾದಿತ ಪ್ರಕರಣಗಳ ನೋಂದಣಿ
- ಹೊಸ ತಾಲೂಕುಗಳ ಪಟ್ಟಿಯನ್ನು ವೀಕ್ಷಿಸಿ
ಆರ್ ಟಿ ಸಿ (ಪಹಣಿ) ಯನ್ನು ಆನ್ಲೈನ್ ನಲ್ಲಿ ಪಡೆಯುವುದು ಹೇಗೆ?
ನಿಮ್ಮ ಜಮೀನಿಗೆ ಸಂಬಂಧಪಟ್ಟ ಆರ್ ಟಿ ಸಿ ಪಹಣಿಯನ್ನು ವೀಕ್ಷಿಸಲು ಹಂತ ಹಂತದ ಪ್ರಕ್ರಿಯೆ ಇಲ್ಲಿದೆ .
ಹಂತ 1 : ಅಧಿಕೃತ ಭೂಮಿ ಕರ್ನಾಟಕ ಲ್ಯಾಂಡ್ ರೆಕಾರ್ಡ್ ವೆಬ್ಸೈಟ್ ಗೆ ಲಾಗಿನ್ ಆಗಿ .
https://landrecords.karnataka.gov.in/ ( ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕರ್ನಾಟಕ ಲ್ಯಾಂಡ್ ರೆಕಾರ್ಡ್ಸ್ ಆನ್ಲೈನ್ ಗೆ ಹೋಗಿ )

ಕರ್ನಾಟಕ ಲ್ಯಾಂಡ್ ರೆಕಾರ್ಡ್ಸ್ ನ ಮುಖ್ಯಪುಟ
ಹಂತ 2: ಇಲ್ಲಿ >VIEW RTC AND MR<ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 3: 'ಮುಂದಿನ ಪುಟ ಓಪನ್ ಆಗುತ್ತೆ ಅಥವಾ ಹೊಸ ಪುಟ ಓಪನ್ ಆಗುತ್ತೆ
ಕರ್ನಾಟಕ ಲ್ಯಾಂಡ್ ರೆಕಾರ್ಡ್ ವೆಬ್ಸೈಟ್ನಲ್ಲಿ ಭೂ ದಾಖಲೆಗಳ ವಿವರಗಳ ಪುಟ
ಹಂತ 4: ನಿಮ್ಮ ಸ್ಥಳಕ್ಕೆ ಸಂಬಂಧಪಟ್ಟ ಎಲ್ಲಾ ವಿವರಗಳನ್ನು ಇಲ್ಲಿ ಭರ್ತಿ ಮಾಡಿ
- ಜಿಲ್ಲೆ
- ತಾಲೂಕು
- ಹೋಬಳಿ
- ಗ್ರಾಮ
- ಸರ್ವೆ ನಂಬರ್
- 'ಗೋ' ಬಟನ್ ಮೇಲೆ ಕ್ಲಿಕ್ ಮಾಡಿ.
- ಸರ್ ನಾಕ್
- ಹಿಸ್ಸಾ ನಂಬರ
- ಅವಧಿ
- Fetch details ಮೇಲೆ ಕ್ಲಿಕ್ ಮಾಡಿ
ಹಂತ 5: ಆಗ ನಿಮ್ಮ ಜಮೀನಿಗೆ ಸಂಬಂಧಪಟ್ಟ ಮಾಲೀಕರು ಮತ್ತು ವಿವರಗಳು ಪ್ರದರ್ಶಿಸಲಾಗುತ್ತದೆ.
ರೆಕಾರ್ಡ್ಸ್ ಆಫ್ ರೈಟ್ಸ್, ಟೆನೆನ್ಸಿ ಅಂಡ್ ಕ್ರಾಪ್ಸ್ ( ಆರ್.ಟಿ.ಸಿ) ಫಾರ್ಮ್ ನಂ 16
ಸರ್ವೆ ನಂಬರಿನ ಪ್ರಕಾರ ನಿಮ್ಮ ಗ್ರಾಮದ ಎಲ್ಲಾ ಭೂ ದಾಖಲೆಗಳನ್ನು ಹುಡುಕಲು ,ಅಥವಾ ನಿಮ್ಮ ಸ್ವಾಧೀನದಾರರ ಭೂ ದಾಖಲೆಗಳನ್ನು ಹುಡುಕಲು ,ಅದೇ ರೀತಿ ನಿಮ್ಮ ನೋಂದಣಿ ಸಂಖ್ಯೆ ಪ್ರಕಾರ ಭೂ ದಾಖಲೆಗಳನ್ನು ಹುಡುಕಲು VIEW RTC
INFORMATION ಮೇಲೆ ಕ್ಲಿಕ್ ಮಾಡಿ. (https://landrecords.karnataka.gov.in/)
ಹಂತ 1: VIEW RTC INFORMATION ಮೇಲೆ ಕ್ಲಿಕ್ ಮಾಡಿದ ನಂತರ ಹೊಸ ಪುಟ ಓಪನ್ ಆಗುತ್ತೆ
ಹಂತ 2: ಎಲ್ಲಿ ನಿಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿ , ನಿಮ್ಮ ಗ್ರಾಮಕ್ಕೆ ಸಂಬಂಧಪಟ್ಟ ಜಿಲ್ಲೆ, ಗ್ರಾಮ, ತಾಲೂಕು ಮತ್ತು ಹೋಬಳಿಯಂತಹ ವಿವರಗಳನ್ನು ಭರ್ತಿ ಮಾಡಿ.
- ಜಿಲ್ಲೆ
- ತಾಲೂಕು
- ಹೋಬಳಿ
- ಗ್ರಾಮ
- ಸರ್ವೆ ಸಂಖ್ಯೆ
- ಸುರ್ನೋಕ್
- ಹಿಸ್ಸಾ ಸಂಖ್ಯೆ
- ನೋಂದಣಿ ಸಂಖ್ಯೆ
- ನೋಂದಣಿ ದಿನಾಂಕ
ಹಂತ 3 ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ FETCH ಮೇಲೆ ಕ್ಲಿಕ್ ಮಾಡಿ, ಆಗ ಬೂದಾಖಲೆಗಳಿಗೆ ಸಂಬಂಧಪಟ್ಟ ವಿವರಗಳು ಪ್ರದರ್ಶಿಸಲಾಗುತ್ತದೆ , ಇಲ್ಲಿ ವಿಶೇಷ ಏನು ಅಂದ್ರೆ ನಿಮ್ಮ ಗ್ರಾಮಕ್ಕೆ ಸಂಬಂಧಪಟ್ಟ ಎಲ್ಲಾ ಸರ್ವೇ ನಂಬರ್ ಗಳ ಆರ್ಟಿಸಿಯನ್ನ ಒಂದೇ ಜಾಗದಲ್ಲಿ ಸುಲಭವಾಗಿ ನೋಡಬಹುದು.
ನಿಮ್ಮ ಜಮೀನಿಗೆ ಸಂಬಂಧಪಟ್ಟ ಆರ್ ಟಿ ಸಿ ಪಹಣಿಯನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ?
ಬ್ಯಾಂಕಿನಲ್ಲಿ ಸಾಲ ಮಾಡುವಾಗ ಸರ್ಕಾರದ ಸಬ್ಸಿಡಿಯನ್ನು ಪಡೆಯುವಾಗ ಈ ರೀತಿ ತುಂಬಾ ವಿಷಯಗಳಿಗೆ ಆರ್ ಟಿ ಸಿ (ಪಹಣಿ)ಅಗತ್ಯವಿರುತ್ತದೆ .
ಹಂತ 1: ನೀವು ಆರ್ ಟಿ ಸಿ ಪಹಣಿಯನ್ನು ಎಲ್ಲಿಯಾದರೂ ಯಾವ ಸಮಯದಲ್ಲಾದರೂ ಆದರೂ ಡೌನ್ಲೋಡ್ ಮಾಡಿಕೊಳ್ಳಲು , ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ . ( https://rtc.karnataka.gov.in/Service78/)

ಇಲ್ಲಿ ನೀವು ಒಂದು ಅಕೌಂಟನ್ನ ಕ್ರಿಯೇಟ್ ಮಾಡಿಕೊಳ್ಳಬೇಕು. ಇದು ತುಂಬಾ ಸುಲಭ ನಿಮ್ಮ ಹೆಸರು ನಿಮ್ಮ ಮೊಬೈಲ್ ನಂಬರ್ ನಿಮ್ಮ ಇಮೇಲ್ ಐಡಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಈ ರೀತಿ ಎಲ್ಲ ಮಾಹಿತಿಯನ್ನು ಟೈಪ್ ಮಾಡಿ ಒಂದು ಹೊಸ ಅಕೌಂಟನ್ನ ಕ್ರಿಯೇಟ್ ಮಾಡಿಕೊಳ್ಳಿ ,
ಆನಂತರ ಲಾಗಿನ್ ಮಾಡಿ ಜಿಲ್ಲೆ , ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಎಲ್ಲವನ್ನ ಭರ್ತಿ ಮಾಡಿ ಆರ್ಟಿಸಿ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಕರ್ನಾಟಕ ಭೂ ದಾಖಲೆಗಳ ಶುಲ್ಕಗಳು ಈ ರೀತಿ ಇವೆ
ದಾಖಲೆಗಳು | ಶುಲ್ಕಗಳು |
ಟಿಪ್ಪನ್ | 15 ರೂ |
RTC ಅಥವಾ ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳ ದಾಖಲೆಗಳು | 10 ರೂ |
ರೂಪಾಂತರದ ಸಾರಗಳು | 15 ರೂ |
ರೂಪಾಂತರ ಸ್ಥಿತಿ | 15 ರೂ |
ಕರ್ನಾಟಕ ಭೂ ದಾಖಲೆಗಳ ವಿಲೇಜ್ ಮ್ಯಾಪ್ ಕಂದಾಯ ನಕ್ಷೆ
ಕರ್ನಾಟಕ ಭೂ ದಾಖಲೆಗಳ ವಿಲೇಜ್ ಮ್ಯಾಪ್ ನಲ್ಲಿ ನೀವು ನಿಮ್ಮ ಗ್ರಾಮಕ್ಕೆ ಸಂಬಂಧಪಟ್ಟ ಕೆರೆ, ಕುಂಟೆ ಕಾಲುದಾರಿ ಬಂಡಿದಾರಿ ಸರ್ವೆ ನಂಬರ್ ಗಡಿ ಗ್ರಾಮದ ಗಡಿ ಎಲ್ಲವನ್ನು ವೀಕ್ಷಿಸಬಹುದು
ಹಂತ 1: ಅಧಿಕೃತ ಕರ್ನಾಟಕ ಲ್ಯಾಂಡ್ ರೆಕಾರ್ಡ್ಸ್ ವೆಬ್ಸೈಟ್ಗೆ ಲಾಗಿನ್ ಮಾಡಿ (https://landrecords.karnataka.gov.in/)
ಹಂತ 2: Survey [SSLR] Services ಸೇವೆಗಳ ಅಡಿಯಲ್ಲಿ, 'REVENUE MAPS' ಟ್ಯಾಬ್ ಅನ್ನು ಕ್ಲಿಕ್ ಮಾಡಿ.

Revenue Maps Online
ಹಂತ 3: ಇಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮ್ಯಾಪ್ ಟೈಪನ್ನ ಆಯ್ಕೆ ಮಾಡಿ ನಿಮ್ಮ ಗ್ರಾಮದ ಹೆಸರನ್ನು ಟೈಪ್ ಮಾಡಿ ಸರ್ಚ್ ಮಾಡಿ ,ನಂತರ PDF ಮುಖಾಂತರ ನಿಮ್ಮ ಗ್ರಾಮದ ನಕ್ಷೆಯನ್ನು ವೀಕ್ಷಿಸಿ .

ಕರ್ನಾಟಕ ಸರಕಾರದ ಅಧಿಕೃತ ವೆಬ್ಸೈಟ್ನಲ್ಲಿ ನಿಮ್ಮ ಜಮೀನಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನ ಸುಲಭವಾಗಿ ತಿಳಿದುಕೊಳ್ಳಬಹುದು.
ನೀವು ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಇನ್ನೂ ಸುಲಭವಾಗಿ ನಿಮ್ಮ ಜಮೀನಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ .
https://play.google.com/store/apps/details?id=com.kannada.land_records_karnataka
Rtc
ಪ್ರತ್ಯುತ್ತರಅಳಿಸಿRequest
ಅಳಿಸಿMaliyappanahalli
ಪ್ರತ್ಯುತ್ತರಅಳಿಸಿPahani
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಕಾಮೆಂಟ್ ಪೋಸ್ಟ್ ಮಾಡಿ