7 Chakras Kannada

    ಮನುಷ್ಯನ ಜೀವನದಲ್ಲಿ ಸಪ್ತ ಚಕ್ರಗಳ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?


ಈ ಕಾಲದಲ್ಲಿ ಎಲ್ಲರಿಗೂ ಸೂಪರ್ ಹೀರೋ ಆಗಬೇಕು ಅನ್ನೋ ಆಸೆ ಇರುತ್ತೆ, ಈ ಕಾರಣದಿಂದ ಸೂಪರ್ ಹೀರೋ ಸಿನಿಮಾಗಳು ಎಲ್ಲರಿಗೂ ಇಷ್ಟ ಆಗುತ್ತೆ, ಆದರೆ ಅವೆಲ್ಲಾ ಕಲ್ಪಿತ ಪಾತ್ರಗಳು , ಅಷ್ಟಕ್ಕೂ ನಮ್ಮ ಮೆದುಳಿಗೆ ಈ ಸೂಪರ್ ಹೀರೋ ಅನ್ನೋ ಆಲೋಚನೆ ಹೇಗೆ ಬರುತ್ತೆ ,ಮಾನವನ ದೇಹದಲ್ಲಿ ಮತ್ತು ಮೆದುಳಿನಲ್ಲಿ ತುಂಬಾ ಶಕ್ತಿಗಳು ಇರುತ್ತೆ ಅಂತ ವಿಜ್ಞಾನಿಗಳು ಕೂಡ ಹೇಳ್ತಿದ್ದಾರೆ , ಅಷ್ಟೇ ಅಲ್ಲ ಈ ವಿಶ್ವದಲ್ಲಿ ಎಲ್ಲದಕ್ಕಿಂತ ರಹಸ್ಯವಾದದ್ದು ಯಾರಿಗೂ ಅರ್ಥವಾಗದೆ ಇರುವುದು ಮನುಷ್ಯನ ಮೆದುಳು.  ಒಂದು ಮಾತ್ರ ಸತ್ಯ ನಮ್ಮ ದೇಹದಲ್ಲಿ ಅನೇಕ ಶಕ್ತಿಗಳು ಇವೆ ಆದರೆ ಅವು ಕೆಲಸಕ್ಕೆ ಬರದೇ ಇರೋ ರೀತಿ ಇವೆ . ಅವುಗಳನ್ನ ನಾವು ಆಕ್ಟಿವೇಟ್ ಮಾಡಬಹುದು ಆದರೆ ಅದು ಅಷ್ಟು ಸುಲಭ ಅಲ್ಲ ಇದು 5 ನಿಮಿಷದಲ್ಲೊ 10 ನಿಮಿಷದಲ್ಲು ಆಗುವ ಕೆಲಸ ಅಲ್ಲ, ಇವೆಲ್ಲ ಆಧ್ಯಾತ್ಮಿಕ ಶಕ್ತಿಗಳು ಇವುಗಳನ್ನ ನಮ್ಮ ಸೈನ್ಸ್ ಮತ್ತು ಟೆಕ್ನಾಲಜಿ ಎಂದಿಗೂ ಪ್ರೂವ್ ಮಾಡೋದಕ್ಕೆ ಸಾಧ್ಯ ಆಗುವುದಿಲ್ಲ ತುಂಬಾ ಜನ ಈ ಆಧ್ಯಾತ್ಮಿಕ ಶಕ್ತಿಗಳನ್ನು 10 ನಿಮಿಷದಲ್ಲಿ ಅರ್ಧ ಗಂಟೆಯಲ್ಲಿ ಆಕ್ಟಿವೇಟ್ ಮಾಡ್ತೀವಿ ಅಂತ ಹೇಳ್ತಾರೆ ಆದರೆ ಅದು ನಿಜವಾಗಲೂ ನಡೆಯುತ್ತಾ ? ಇದು ಖಂಡಿತ ಸಾಧ್ಯವಿಲ್ಲ.

ಈಗ ಮನುಷ್ಯನ ದೇಹದ ಒಳಗೆ ಇರುವ ಆ  ಅಗೋಚರ ಚಕ್ರಗಳ ಬಗ್ಗೆ ತಿಳಿಯೋಣ ಬನ್ನಿ 

1). ಮೂಲಾಧಾರ: ಚಕ್ರ.

ಇದು ನಮ್ಮ ದೇಹದಲ್ಲಿರುವ ಮೊದಲನೇ ಚಕ್ರ ಇದು ಸೊಂಟದ ಕೆಳಗೆ 4 ರೆಕ್ಕೆಗಳಲ್ಲಿರುವ ಚಕ್ರ ಇದು ಆಧಾರಚಕ್ರ, 99.99%ಮಾನವರ ಬುದ್ಧಿ ಈ ಚಕ್ರದ ಮೇಲೆನೆ ಆಧಾರವಾಗಿರುತ್ತ,  ಇದರಲ್ಲೇ ಇದ್ದು ಸತ್ತು ಹೋಗ್ತಾರೆ , ಯಾರು ಭೋಗಕ್ಕೆ ಸಂಭೋಗಕ್ಕೆ ನಿದ್ದೆಗೆ ಪ್ರಾಮುಖ್ಯತೆ ಕೊಡ್ತಾರೋ ಅವರ ಶಕ್ತಿ ಇದರ ಸುತ್ತನೇ ಸುತ್ತುತ್ತಿರುತ್ತೆ , ಆದರೆ ಇದನ್ನ ಹೇಗೆ ಆಕ್ಟಿವೇಟ್ ಮಾಡಬೇಕು ಮಾನವ ಮೃಗದ ರೀತಿ ಇರೋವರ್ಗು ಅವನು ಭೋಗ ಸಂಭೋಗವನ್ನ ಕಂಟ್ರೋಲ್ ಮಾಡಲಾರ ಇವುಗಳ ಮೇಲೆ ಸಂಯಮವನ್ನ ಪಾಲಿಸಬೇಕು ಧ್ಯಾನ ಹೆಚ್ಚಾಗಿ ಮಾಡಬೇಕು  ನಿಮ್ಮ ಧ್ಯಾನ ಎಷ್ಟು ಆಳವಾಗಿ ಇದ್ರೆ ಈ ಚಕ್ರ ಅಷ್ಟು ವೇಗವಾಗಿ ಆಕ್ಟಿವೇಟ್ ಆಗುತ್ತೆ ಇದಕ್ಕೆ ಮಂತ್ರ ಕೂಡ ಉಚ್ಚಾರ ಮಾಡಬಹುದು   ಈಚಕ್ರ ಆಕ್ಟಿವೇಟ್ ಆದರೆ ಮನುಷ್ಯನ ದೇಹದ ಒಳಗೆ ವೀರತ್ವ ಬರುತ್ತೆ ಭಯ ಬೀಳದೆ ಮುಂದೆ ಸಾಗಬಹುದು ಕ್ರಿಯಾಸಿದ್ಧಿಯನ್ನು ಪಡೆಯಲು ಇದು ಹೆಚ್ಚಾಗಿ ಯೂಸ್ ಆಗುತ್ತೆ 



2). ಸ್ವಾಧಿಸ್ಠಾನ ಚಕ್ರ.

ಈ ಚತ್ರ ಮೊದಲನೇ ಚಕ್ರಕ್ಕೆ ನಾಲ್ಕು ಇಂಚು ಮೇಲೆ ಇರುತ್ತೆ ಇದು 6 ರೆಕ್ಕೆಗಳಲ್ಲಿರುವ ಚಕ್ರ ಮಾನವನಿಗೆ ಮೋಜಿ ಮಸ್ತಿ ಅಂದ್ರೆ ತುಂಬಾ ಇಷ್ಟ ಮನರಂಜನೆ ಅಂದ್ರೆ ಇನ್ನೂ ಇಷ್ಟ ಇದಕ್ಕಾಗಿ ನಾಟಕಗಳನ್ನ ಸಿನಿಮಾಗಳನ್ನ ನೋಡುತ್ತಾನೆ ಅವೆಲ್ಲ ನಿಜ ಅಲ್ಲ ಅಂತ ಗೊತ್ತಿದ್ರೂ ಕೂಡ ಅವುಗಳಿಗೆ ಕನೆಕ್ಟ್ ಆಗಿ ಎಮೋಷನಲ್ ಆಗಿ ಫೀಲ್ ಆಗ್ತಾನೆ ಈ ಒಂದು ಚಕ್ರ ಆಕ್ಟಿವೇಟ್ ಆದರೆ ಮನುಷ್ಯನಲ್ಲಿರುವ ಕ್ರೋರತ್ವ ಗರ್ವ ಅವಿಶ್ವಾಸ ಕೋಪ ಇಂತಹ ದುರ್ಗುಣಗಳೆಲ್ಲ ನಾಶವಾಗುತ್ತ. ನಿಮ್ಮ ಸುತ್ತ ಇರುವ ಪ್ರತಿ ಮನುಷ್ಯನಲ್ಲಿ  ಈ ರೋಗಗಳು ಇರುತ್ತೆ ನೀವು ಧ್ಯಾನ ಮಾಡುತ್ತಿರುವಾಗ ಇವುಗಳ ಮೇಲೆ ಗಮನ ಇಡಬೇಕು ನಂತರ ಈ ಮಂತ್ರಘೋಷವನ್ನ ಜಪಿಸಬೇಕು.



3). ಮಣಿಪೂರ: ಚಕ್ರ


ಈ ಚಕ್ರ ಮನುಷ್ಯನ ನಾಭಿ ಮೂಲದಲ್ಲಿ ಇರುತ್ತೆ ಇದು ಹತ್ತು ರೆಕ್ಕೆಗಳಿರುವ ಚಕ್ರ ಇದು ಆಕ್ಟಿವ್ ಆದ್ರೆ ನೀವು ಮಾಡುವ ಎಲ್ಲಾ ಕೆಲಸಗಳ ಮೇಲೆ ನಿಮಗೆ ಒಂದು ಪಾಸಿಟಿವ್ ಥಿಂಕಿಂಗ್ ಬರುತ್ತೆ ಪಾಸಿಟಿವ್ ಎನರ್ಜಿ ಬರುತ್ತೆ ನಿಮ್ಮ ಎಲ್ಲಾ ಕೆಲಸಗಳು ಸಕ್ರಿಯವಾಗಿ ನಡೆಯುತ್ತೆ , ಈ ಚಕ್ರಕ್ಕೆ ಮಂತ್ರ ರಾಮ್ ನೀವು ಧ್ಯಾನ ಮಾಡುತ್ತಿರುವಾಗ ಈ ಚಕ್ರ ತಿರುಗುತ್ತಿರುವ ರೀತಿ ವಹಿಸಿಕೊಳ್ಳಬೇಕು ನಿಮ್ಮ ಧ್ಯಾನವೆಲ್ಲ ಆ ಚಕ್ರದ ಮೇಲೆನೆ ಕೇಂದ್ರೀಕೃತವಾಗಿರಬೇಕು ಇದು ಆಕ್ಟಿವೇಟ್ ಆಗುವುದರಿಂದ ನಿಮಗೆ ನಂಬಿಕೆ ಜಾಸ್ತಿ ಆಗುತ್ತೆ ಕಾನ್ಫಿಡೆನ್ಸ್ ಬೆಳೆಯುತ್ತೆ ನೀವು ಮಾಡಬೇಕಾದ ಕೆಲಸವನ್ನ ಮಾಡಲು ಹಿಂಜರಿಯೋದಿಲ್ಲ.



4). ಅನಾಹತ ಚಕ್ರ

ಇದು ನಿಮ್ಮ ಹೃದಯದ ಹತ್ತಿರ ಇರುತ್ತೆ ಇದು ಆಕ್ಟಿವೇಟ್ ಆದರೆ ನಿಮ್ಮಲ್ಲಿ ತುಂಬಾ ಪಾಸಿಟಿವಿಟಿ ಶಕ್ತಿ ಜಾಸ್ತಿ ಆಗುತ್ತೆ ನೀವು ಸಾಮಾನ್ಯ ವ್ಯಕ್ತಿಗಳಿಗಿಂತ ವಿಭಿನ್ನವಾಗಿ ಆಲೋಚನೆ ಮಾಡುತ್ತೀರಾ ಆ ಸಮಯದಲ್ಲಿ ಬೇರೆಯವರು ನಿಮ್ಮನ್ನ ಹುಚ್ಚರು ಅಂತ ಕೂಡ ಕರೀಬಹುದು ಏಕೆಂದ್ರೆ ಆಗ ನಿಮ್ಮ ಆಲೋಚನೆಗಳು ಬೇರೆಯವರಿಗಿಂತ ತುಂಬಾ ವಿಭಿನ್ನವಾಗಿ ಬೇರೆ ರೀತಿ ಇರುತ್ತೆ , ನಿಮ್ಮಲ್ಲಿರುವ ಹಿಂಸೆ ದುರಾಸೆ ದುರಾಲೋಚನೆ ಇವೆಲ್ಲ ನಾಶವಾಗುತ್ತೆ ನೀವು ಮಹಾಪುರುಷರಲ್ಲಿ ಸ್ಥಾನವನ್ನು ಸಂಪಾದನೆ ಮಾಡುತ್ತೀರಾ ಇದಕ್ಕಾಗಿ ನೀವು ಈ ಮಂತ್ರವನ್ನು ಬಳಸಬಹುದು.



5). ವಿಶುದ್ಧ: ಚಕ್ರ 

ಇದು ನಿಮ್ಮ ಗಂಟಲಿನಲ್ಲಿರುವ ಸರಸ್ವತಿ ಸ್ಥಾನ ಇದು 16 ರೆಖೆಗಳ ಚಕ್ರ ನಿಮ್ಮ ಶಕ್ತಿಯಲ್ಲ ಇದರ ಸುತ್ತನೇ ಇರುತ್ತೆ ಧ್ಯಾನ ಮಾಡುತ್ತಿರುವಾಗ ನೀವು ಈ ಚಕ್ರದ ಮೇಲೆ ಮನಸ್ಸನ್ನು ಕೇಂದ್ರೀಕರಿಸಬೇಕು ಇದಕ್ಕೆ ನೀವು ಈ ಮಂತ್ರವನ್ನು ಬಳಸಬಹುದು.



6) ಆಜ್ಞಾ: ಭ್ರೂ ಚಕ್ರ.


 

ಈ ಚಕ್ರ ಹಣೆಯಲ್ಲಿ ಇರುತ್ತೆ  ಈಚಕ್ರ ಆಕ್ಟಿವೇಟಾ ಆದರೆ ಹಸಿವು ದಾಹವನ್ನ ಕಂಟ್ರೋಲ್ ಮಾಡಿಕೊಳ್ಳಬಹುದು ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ನಿಲ್ಲಿಸಬಹುದು ಈ ಚಕ್ರದಲ್ಲಿ ಅಪಾರವಾದ ಶಕ್ತಿಗಳು ಇರುತ್ತೆ ಇದರಿಂದ ನಿಮ್ಮಲ್ಲಿರುವ ಎಲ್ಲಾ ಶಕ್ತಿಗಳು ಎಚ್ಚರವಾಗುತ್ತದೆ ನೀವು ಸಿದ್ಧಪುರುಷರಾಗ್ತೀರಾ ನೀವು ಯಾರು ನೋಡಲು ಸಾಧ್ಯವಾಗದೇ ಇರುವಗಳನ್ನು ಕೂಡ ನೋಡಬಹುದು ಭವಿಷ್ಯತ್ತಿನಲ್ಲಿ ನಡೆಯುವ ವಿಷಯಗಳನ್ನು ಕೂಡ ತಿಳಿದುಕೊಳ್ಳಬಹುದು ಈ ಚಕ್ರದ ಮೂಲ ಮಂತ್ರ OM...........



7). ಸಹಸ್ರಾರ ಚಕ್ರ.
ಇದು ನಿಮ್ಮ ಮೆದುಳಿನ ಭಾಗದಲ್ಲಿ ಗರಿಷ್ಠ ಸ್ಥಾನದಲ್ಲಿ ಇರುತ್ತೆ ಯಾರಾದ್ರೂ ಸರಿ ಎಲ್ಲ ನಿಯಮಗಳನ್ನು ಪಾಲಿಸಿ ಇಲ್ಲಿಗೆ ಸೇರಿಕೊಂಡರೆ ಅವರು ಆನಂದಮಯ ದೇಹಕ್ಕೆ ಸೇರಿಕೊಂಡಿದ್ದಾರೆ ಅಂತ ಅರ್ಥ ಮೂಲಾದಾರ ಚಕ್ರದಿಂದ ಇಲ್ಲಿಗೆ ಸೇರಿಕೊಳ್ಳಬಹುದು ಪ್ರತಿನಿತ್ಯ ಧ್ಯಾನ ಮಾಡುವುದರಿಂದ ಈ ಚಕ್ರ ಆಕ್ಟಿವೇಟ್ ಆಗುತ್ತೆ ಎಲ್ಲಾ ಚಕ್ರಗಳನ್ನು ದಾಟಿಕೊಂಡು ಬಂದರೆ ಅವರಿಗೆ ಜ್ಞಾನೋದಯವಾಗುತ್ತೆ ಅವರು ಬುದ್ಧನಂತೆ ಸಿದ್ಧಪುರುಷರಾಗ್ತಾರೆ ಇದರಿಂದ ಅಪಾರವಾದ ಶಕ್ತಿಗಳು ಬರುತ್ತೆ.

ಈ7 ಚಕ್ರಗಳನ್ನ ಆಕ್ಟಿವೇಟ್ ಮಾಡಿಕೊಂಡ ಮಹಾನುಭಾವರು ಆ ಶಕ್ತಿಗಳನ್ನ ಅವರ ಸ್ವಾರ್ಥಕ್ಕಾಗಿ ಎಂದಿಗೂ ಬಳಸಿಕೊಳ್ಳಲೇ ಇಲ್ಲ ಏಕೆಂದರೆ ಅವರ ಆಲೋಚನೆಗಳು ಪೂರ್ತಿಯಾಗಿ ಬದಲಾಗಿ ಹೋಗಿರುತ್ತೆ  ಭಗವಂತನ ಸೃಷ್ಟಿ ರಹಸ್ಯ ಅವರಿಗೆ ಅರ್ಥವಾಗಿರುತ್ತೆ , ಭಗವಂತನ ಹತ್ತಿರ ನೇರವಾಗಿ ಮಾತಾಡುವ ಶಕ್ತಿ ಕೂಡ ಅವರಿಗೆ ಬಂದಿರುತ್ತೆ ಈ ಜೀವನ ಆ ಭಗವಂತ ಆಡಿಸುವ ಆಟ ಅಂತ ಅವರಿಗೆ ಗೊತ್ತಿರುತ್ತೆ ಆದ್ದರಿಂದಲೇ ಅವರಿಗೆ ಯಾವುದೇ ಆಸೆ ಇರೋದಿಲ್ಲ ನಾನು ನನ್ನದು ಎಂಬ ಭಾವನೆ ಇರುವುದಿಲ್ಲ ಎಲ್ಲವೂ ಒಂದೇ ಅನ್ನೋ ಭಾವನೆಯಿಂದ ಇದಕ್ಕೆ ಉದಾಹರಣೆ  ಬುದ್ಧ ಭಗವಾನರು , 

ನಾವು ಧ್ಯಾನ ಮಾಡಿ ಈ ಎಲ್ಲಾ ಚಕ್ರಗಳನ್ನು ಆಕ್ಟಿವೇಟ್ ಮಾಡೋದಕ್ಕೆ ಸಾಧ್ಯ ಆಗೋದಿಲ್ಲ ಆದ್ರೆ ಏಕಾಗ್ರತೆಯಿಂದ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ ಒತ್ತಡ ದೂರ ಆಗುತ್ತೆ ಆತ್ಮವಿಶ್ವಾಸ ಬೆಳೆಯುತ್ತದೆ ನಮ್ಮ ದೇಹಕ್ಕೆ ಬರುವ ಅನೇಕ ರೋಗಗಳಿಂದ ದೂರ ಇರಬಹುದು 

ನೀವು ಈ ಏಳು ಚಕ್ರಗಳನ್ನು ಆಕ್ಟಿವೇಟ್ ಮಾಡಬೇಕು ಅಂದ್ರೆ ನಿಮ್ಮಲ್ಲಿರುವ ಎಲ್ಲಾ ಕೋರಿಕೆಗಳು ಆಸೆಗಳು ದುರಾಸೆಗಳು ಎಲ್ಲವೂ ದೂರಾದ ನಂತರವೇ ಈ ಆಕ್ಟಿವೇಟ್ ಆಗುತ್ತೆ , ಆದರೆ ಈ ಸಮಾಜದಲ್ಲಿ ನಮಗಿರುವ ಸಮಸ್ಯೆಗಳಲ್ಲಿ ಕಷ್ಟಗಳಲ್ಲಿ ಸಂಸಾರ ಸಂಬಂಧಗಳಲ್ಲಿ ಇವುಗಳನ್ನೆಲ್ಲ ದೂರ ಮಾಡಿ ಈ ಚಕ್ರಗಳನ್ನು ಆಕ್ಟಿವೇಟ್ ಮಾಡಿಕೊಳ್ಳುವುದು ತುಂಬಾನೇ ಕಷ್ಟ , ಏಕಾಗ್ರತೆಯಿಂದ ಧ್ಯಾನ ಮಾಡೋಣ ಅಂದ್ರೆ ನಮಗೆ ಅನೇಕ ಆಲೋಚನೆಗಳು ಬರುತ್ತೆ ನಾವು ಒಂದೇ ಬಾರಿ ಧ್ಯಾನವನ್ನು ಮಾಡೋದಿಕ್ಕೆ ಸಾಧ್ಯವಾಗುವುದಿಲ್ಲ ಅದಕ್ಕೆ ಪ್ರಯತ್ನ ಪಡಬೇಕು ನಿರಂತರವಾಗಿ ಪ್ರಯತ್ನ ಪಡಬೇಕು ಆಗಲೇ ಆ ಧ್ಯಾನದಲ್ಲಿ ಮುಳುಗಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯ.....


ಈ ವಿಷಯವನ್ನು ವಿಡಿಯೋ ರೂಪದಲ್ಲಿ ಧ್ವನಿ ಮುಖಾಂತರ ಕೇಳಿದ್ದಾರೆ ಇನ್ನು ಅದ್ಭುತ ವಾಗಿರುತ್ತೆ.




 


Post a Comment

ನವೀನ ಹಳೆಯದು