ಪ್ರತಿದಿನ ವಾಕಿಂಗ್ ಮಾಡಿದರೆ ಎಷ್ಟು ಪ್ರಯೋಜನ ಇದೆ ಗೊತ್ತಾ?
ನಡಿಗೆ ಅನ್ನೋದು ಒಂದು ಸಾಮಾನ್ಯವಾದ ಪ್ರಕ್ರಿಯೆ, ಯಾವುದೇ ಖರ್ಚಿಲ್ಲದ ಒಂದು ಸರಳವಾದ ವ್ಯಾಯಾಮ. ಎಲ್ಲಿಯಾದರೂ ಯಾವ ಸಮಯದಲ್ಲಾದರೂ ಈ ವ್ಯಾಯಾಮವನ್ನು ಮಾಡಬಹುದು. ವಾಕಿಂಗ್‌ನಿಂದ ಸಿಗುವ ಲಾಭಗಳು ತುಂಬಾನೇ ಜಾಸ್ತಿ, ನಷ್ಟಗಳು ತುಂಬಾ ಕಮ್ಮಿ. ಈ ಲೇಖನದಲ್ಲಿ ನಾವು ವಾಕಿಂಗ್‌ನಿಂದ ಸಿಗುವ 10 ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

1.ವಾಕಿಂಗ್‌ನಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅವಕಾಶ ಕಮ್ಮಿಯಾಗುತ್ತೆ. ರಕ್ತದೊತ್ತಡ ಕಡಿಮೆ ಮಾಡೋದಕ್ಕೆ ಸಹಾಯ ಮಾಡುತ್ತೆ. ವೇಗವಾಗಿ ನಡೆಯೋದ್ರಿಂದ ಹೃದಯಕ್ಕೂ ಮತ್ತು ಶ್ವಾಸಕೋಶಕ್ಕೂ ತುಂಬಾ ಒಳ್ಳೆಯದು. ಇದರಿಂದ ಆತಂಕ ಅಥವಾ ಖಿನ್ನತೆಯಿಂದ ಸಂಕಟಪಡುವವರಿಗೆ ನಡಿಗೆ ತುಂಬಾ ಒಳ್ಳೆಯದು.

2.ವಾಕಿಂಗ್‌ನಿಂದ ದೇಹದಲ್ಲಿರುವ ಮೂಳೆಗಳು ಬಲಿಷ್ಠವಾಗುತ್ತವೆ. ಮೂಳೆಗಳು ದುರ್ಬಲವಾಗಿ ಬದಲಾಗೋದನ್ನು ನಡಿಗೆಯಿಂದ ನಿವಾರಿಸಬಹುದು.

3.ಪ್ರತಿ ದಿನ ವಾಕಿಂಗ್ ಮಾಡುವುದರಿಂದ ದೇಹದಲ್ಲಿರುವ ಮಾಂಸಖಂಡಗಳು ಬಲಿಷ್ಠವಾಗುತ್ತವೆ. ನಡಿಗೆ ದೇಹವನ್ನು ಸಮತೋಲನದಲ್ಲಿ ಇಡುತ್ತೆ. ದೇಹಕ್ಕೆ ಸರಿಯಾದ ಆಕೃತಿಯನ್ನು ಕೊಡುತ್ತೆ.

4.ತೂಕವನ್ನು ಕಮ್ಮಿಮಾಡಿಕೊಳ್ಳಲು ವಾಕಿಂಗ್ ಒಂದು ಒಳ್ಳೆ ಮಾರ್ಗ. ನಡಿಗೆಯಿಂದ ದೇಹದ ಶಕ್ತಿ ಖರ್ಚಾಗುತ್ತೆ, ಕ್ಯಾಲೋರಿಸ್ ಬರ್ನ್ ಆಗುತ್ತೆ. ಬೆಳಗ್ಗೆ ಸಮಯದಲ್ಲಿ ವಾಕಿಂಗ್ ಮಾಡಿದ್ರೆ ಹಸಿವನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬಹುದು.

5.ನಡಿಗೆಯಿಂದ ದೇಹದಲ್ಲಿ ಶುಗರ್ ಲೆವೆಲ್ಸ್ ಕಂಟ್ರೋಲ್‌ನಲ್ಲಿ ಇರುತ್ತವೆ. ರೆಗ್ಯುಲರ್ ಆಗಿ ನಡೆಯೋದ್ರಿಂದ ದೇಹದಲ್ಲಿ ಕೊಬ್ಬು ಸ್ಟೋರ್ ಆಗದೇ ಇರುತ್ತೆ. ಇನ್ಸುಲಿನ್‌ಗೆ ದೇಹ ರಿಯಾಕ್ಟ್ ಆಗುವ ಪ್ರಕ್ರಿಯೆಯನ್ನು ಸುಧಾರಿಸುತ್ತೆ.
6.ಅತ್ಯಂತ ಮುಖ್ಯವಾಗಿ ವಾಕಿಂಗ್ ನಮ್ಮ ಆಯುಷ್ಯವನ್ನು ಬೆಳೆಸುತ್ತೆ. 16 ರಿಂದ 20 ವರ್ಷ ಹೆಚ್ಚು ಕಾಲ ಜೀವಿಸಬಹುದು ಎಂದು ಅಧ್ಯಯನಗಳು ಹೇಳಿವೆ.
7.ವಾಕಿಂಗ್ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಡಿಪ್ರೆಶನ್ ವಿಷಯದಲ್ಲಿ ಒಂದು ಔಷಧಿಯಾಗಿ ಕೆಲಸ ಮಾಡುತ್ತೆ. ಮಾರ್ನಿಂಗ್ ವಾಕಿಂಗ್‌ನಿಂದ ಮೂಡ್ ಬೂಸ್ಟ್ ಆಗುತ್ತೆ.
8.ಮಾರ್ನಿಂಗ್ ಬಹಿರಂಗ ಪ್ರದೇಶದಲ್ಲಿ ವಾಕಿಂಗ್ ಮಾಡುವುದರಿಂದ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ರೋಗನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ ಮತ್ತು ಜೀರ್ಣಕ್ರಿಯೆ ಇಂಪ್ರೂವ್ ಆಗುತ್ತದೆ.
9.ಒಳ್ಳೆ ಶೂಸ್ ಮತ್ತು ಸೌಕರ್ಯವಂತ ಬಟ್ಟೆಗಳನ್ನು ಧರಿಸುವುದರಿಂದ ಸೊಂಟ ಮತ್ತು ಮೊಣಕಾಲಿನ ಮೇಲಿನ ಒತ್ತಡ ಕಮ್ಮಿಯಾಗುತ್ತದೆ.
10.ವಾಕಿಂಗ್ ಅನ್ನು ನಿಧಾನವಾಗಿ ಪ್ರಾರಂಭಿಸಿ, ಕ್ರಮವಾಗಿ ವೇಗ ಬೆಳೆಸಬೇಕು. ಗಂಟೆಗೆ 6.4 ಕಿಮೀ ವೇಗದಲ್ಲಿ 30 ನಿಮಿಷ ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದು.

ಕಾಮೆಂಟ್ ಪೋಸ್ಟ್ ಮಾಡಿ