ನಮ್ಮ ಶ್ವಾಸಕೋಶಗಳು ಹೇಗೆ ಕೆಲಸ ಮಾಡುತ್ತೆ ಗೊತ್ತಾ???
ನಾವು ಆಕ್ಸಿಜನ ಸೆಳೆದುಕೊಂಡು ಕಾರ್ಬನ್ ಡೈಯಾಕ್ಸೈಡ್ ರಿಲೀಸ್ ಮಾಡ್ತೀವಿ ಅಂತ ನಮ್ಮೆಲ್ಲರಿಗೂ ಗೊತ್ತು, ಆದರೆ ನಮ್ಮ ಸುತ್ತ ಇರುವ ಗಾಳಿಯಲ್ಲಿ 21% ಆಕ್ಸಿಜನ್ ಇದ್ರೆ 78% ನೈಟ್ರೋಜನ್ ಇರುತ್ತೆ..
ಅಂದ್ರೆ ನಾವು ಉಸಿರಾಡುವ ಗಾಳಿಯಲ್ಲಿ ಆಕ್ಸಿಜನ್ಗಿಂತ ನೈಟ್ರೋಜನ್ ಜಾಸ್ತಿ ಇರುತ್ತೆ ಆದರೆ ಇಲ್ಲಿ ಅದ್ಭುತ ಏನು ಅಂದ್ರೆ ನಮ್ಮ ದೇಹ ಆಕ್ಸಿಜನ್ ಜೊತೆ ವೇಗವಾಗಿ ರಿಯಾಕ್ಟ್ ಆಗುತ್ತೆ ,ಆದ್ದರಿಂದ ನೈಟ್ರೋಜನ್ ಯಾವ ಕೆಲಸಕ್ಕೂ ಬರೋದಿಲ್ಲ ಅದರಿಂದ ನಮಗೆ ಯಾವುದೇ ಸಮಸ್ಯೆನೂ ಇಲ್ಲ , ಅದೇ ರೀತಿ ನಮ್ಮ ದೇಹದಲ್ಲಿ ಎನರ್ಜಿ ಕ್ರಿಯೇಟ್ ಆಗ್ಬೇಕು ಅಂದ್ರೆ ಕೇವಲ ಆಕ್ಸಿಜನ್ ಮಾತ್ರ ಯೂಸ್ ಆಗುತ್ತೆ ಈ ರೀತಿ ನಾವು ಉಸಿರಾಡುವ ಗಾಳಿಯಲ್ಲಿ 21% ಆಕ್ಸಿಜನ್ ಇದ್ರೆ ನಾವು ಹೊರಬಿಡುವ ಗಾಳಿಯಲು ಕೂಡ 16% ಆಕ್ಸಿಜನ್ ಇರುತ್ತೆ ಅಂದ್ರೆ ನಾವು ಉಸಿರಾಡುವ ಗಾಳಿಯಲ್ಲಿ ಕೇವಲ 5% ಆಕ್ಸಿಜನ ಮಾತ್ರ ನಮ್ಮ ದೇಹ ಸೆಳೆದುಕೊಳ್ಳುತ್ತದೆ
ಮೊದಲು ನಮ್ಮ ಉಸಿರಾಟದ ವ್ಯವಸ್ಥೆ ಮೂಗಿನಿಂದ ಪ್ರಾರಂಭವಾಗುತ್ತೆ ನಮ್ಮ ಮೂಗಿನ ಒಳಗಿನ ಚರ್ಮ ಮ್ಯೂಕಸ್ ನಿಂದ ತೇವದಿಂದ ಇರುತ್ತೆ ಅದರಲ್ಲಿ ಚಿಕ್ಕ ಚಿಕ್ಕ ಕೂದಲು ಇರುತ್ತೆ ನಾವು ಉಸಿರಾಡಿದ ಗಾಳಿಯಲ್ಲಿರುವ ಧೂಳು dustಪಾರ್ಟಿಕಲ್ಸ್ ಒಳಗೆ ಮ್ಯೂಕಸ್ ಗೆ ಅಂಟಿಕೊಂಡು ಅಲ್ಲಿ ನಿಂತು ಹೋಗುತ್ತೆ ಅದೇ ರೀತಿ ಶ್ವಾಸಕೋಶಗಳಿಗೆ ಹೋಗುವ ಗಾಳಿ ಅನ್ನೋದು ತೇವದಿಂದ ಮತ್ತು ಸ್ವಲ್ಪ ಬಿಸಿಯಾಗಿ ಒಳಗೆ ಹೋಗಬೇಕು ಇಲ್ಲ ಅಂದ್ರೆ ಲಂಗ್ಸ್ ನ ಒಳಗೆ ಇರುವ ಭಾಗಗಳು ಡ್ಯಾಮೇಜ್ ಆಗುತ್ತೆ ಆದ್ದರಿಂದ ಮೂಗಿನ ಒಳಗೆ ನಾಜಲ್ ಕ್ಯಾವಿಟಿ Nasal cavity ಅನ್ನೂ ಭಾಗದಲ್ಲಿ ರಕ್ತನಾಳಗಳು ನಾವು ಸೆಳೆದುಕೊಂಡ ಗಾಳಿಯನ್ನು ಬಿಸಿಯಾಗಿ ತಯಾರು ಮಾಡಿದರೆ ಮೂಗಿನ ಒಳಗೆ ಗೋಡೆಗಳ ಮೇಲೆ ಇರುವ ಮ್ಯೂಕಸ್ ಗಾಳಿಯನ್ನು ತೇವದಿಂದ ಇರುವ ರೀತಿ ಮಾಡುತ್ತೆ.
ಈ ವಿಷಯ ನಿಮಗೆ ಗೊತ್ತಾ ನಮ್ಮ ಮೂಗಿಗೆ ಇರುವ ಎರಡು ರಂದ್ರಗಳಲ್ಲಿ ಒಂದೊಂದು ಸಮಯದಲ್ಲಿ ಕೇವಲ ಒಂದು ರಂದ್ರ ಮಾತ್ರ ಕೆಲಸ ಮಾಡುತ್ತದೆ ಅಂದ್ರೆ ಒಂದು ರಂಧ್ರದಿಂದ ಮಾತ್ರ ಗಾಳಿಯನ್ನು ಸೆಳೆದುಕೊಳ್ಳುವುದು ಮತ್ತು ಬಿಡುವುದು ನಡೆಯುತ್ತೆ . ಬೇಕಾದರೆ ನೀವು ಕೂಡ ಒಂದು ಬಾರಿ ಚೆಕ್ ಮಾಡಿ ನೋಡಿ.
ನಮ್ಮ ಮೂಗಿನ ಒಳಗೆ tissues ಇರುತ್ತೆ ಒಂದು ಸಮಯದಲ್ಲಿ ಬಲಮೂಗಿನ ರಂಧ್ರದಲ್ಲಿ ಇರುವ ಟಿಶ್ಯೂಸ್ ಹುಬ್ಬಿ ಆ ರಂದ್ರವನ್ನ ಬ್ಲಾಕ್ ಮಾಡುತ್ತೆ ಆಗ ಎಡರಂದ್ರ ಪೂರ್ತಿಯಾಗಿ ಓಪನ್ ಆಗಿರುವುದರಿಂದ ಉಸಿರಾಟ , ಆ ರಂದ್ರದಿಂದ ಮಾತ್ರ ನಡೆಯುತ್ತೆ ಆದರೆ ಬಲಭಾಗದ ರಂದ್ರದಿಂದ ಸ್ವಲ್ಪ ಮಟ್ಟದ ಉಸಿರಾಟ ಮಾತ್ರ ನಡೆಯುತ್ತೆ ಸ್ವಲ್ಪ ಸಮಯದ ನಂತರ ಎಡ ಭಾಗದಲ್ಲಿರುವ ಟಿಶ್ಯೂಸ್ ಉಬ್ಬಿ ಆ ರಂದ್ರವನ್ನ ಬ್ಲಾಕ್ ಮಾಡುತ್ತೆ ಆಗ ಬಲಭಾಗದರಂದ್ರ ಓಪನ್ ಆಗಿ ಅದರಿಂದ ಮಾತ್ರ ಉಸಿರಾಟ ನಡೆಯುತ್ತೆ . ಈ ರೀತಿ ಬದಲಾಗುತ್ತಾ ಇರುತ್ತೆ , ಇದನ್ನ nasal cycleಅಂತ ಕರೀತಾರೆ...
ಈಗ ಸ್ವಾಶಕೋಶದ ನಿರ್ಮಾಣವನ್ನು ನೋಡೋಣ.
ಮೊದಲು ಮೂಗು ಆನಂತರ ನಾಸಲ್ ಕ್ಯಾವಿಟಿ ,ಆನಂತರ ಗಂಟಲು ,ಇಲ್ಲಿಂದ ಲಂಗ್ಸ್ ವರೆಗೆ ವಿಂಡ್ ಪೈಪ್ ಶ್ವಾಸನಾಳ ಇರುತ್ತೆ ,ಎಲ್ಲಿಂದ ಈ ವಿಂಡ್ ಪೈಪ್ ಅನ್ನೋದು ಎರಡು ಭಾಗಗಳಾಗಿ ಬೇರೆ ಆಗುತ್ತೆ ಅವುಗಳನ್ನ ಬ್ರೌನ್ ಕಾಯಿ bronchiಹಂತ ಕರೀತಾರೆ , ಇವು ಗಿಡಕ್ಕೆ ಇರುವ ಕೊಂಬುಗಳ ರೀತಿ ಸಣ್ಣನೆಯ ವಾಯು ಮಾರ್ಗಗಳ ರೀತಿ ವಿಸ್ತರಿಸಿರುತ್ತೆ ,ಈ ವಿಷಯ ನಿಮಗೆ ಗೊತ್ತಾ ನಮ್ಮ ಲಂಗ್ಸ್ ನಲ್ಲಿ ಇರುವ ಗಾಳಿ ಪ್ರಯಾಣಿಸುವ ಈ ಸಣ್ಣನೆಯ ಪೈಪ್ಗಳನ್ನ ಒಂದರ ಪಕ್ಕ ಒಂದರಂತೆ ಜೋಡಿಸುತ್ತಾ ಹೋದರೆ ಸುಮಾರು 2400 ಕಿಲೋಮೀಟರ್ ಉದ್ದ ಇರುತ್ತೆ ಇವುಗಳ ಕೊನೆಯಲ್ಲಿ ಸ್ಪಾಂಜ್ ರೀತಿ ಚಿಕ್ಕ ಚಿಕ್ಕ ಗಾಳಿ ಉಂಡೆಗಳು ಇರುತ್ತೆ ಇವುಗಳನ್ನ alveoli ಆಲ್ ವಿಯೋ ಲೈ ಅಂತ ಕರೀತಾರೆ ಇಂತಹ ನಿರ್ಮಾಣಗಳು ನಮ್ಮ ಸ್ವಾಶಕೋಶಗಳಲ್ಲಿ ಸುಮಾರು ಐವತ್ತು ಕೋಟಿ ಗಾಳಿಉಂಡೆಗಳು ಇರುತ್ತೆ , ಒಂದೊಂದು ಆಲ್ ವಿಯೋ ಲೈ ಅನ್ನೋದು 0.3mm ಮಿಲಿ ಮೀಟರ್ ಸೈಜ್ ಇರುತ್ತೆ ಇಷ್ಟು ಚಿಕ್ಕದಾಗಿರುವ ಆಲ್ ವಿಯೋ ಲೈ ಸುತ್ತ ಸಣ್ಣನೆಯ ರಕ್ತನಾಳಗಳು ಸುತ್ತುವರದಿರುತ್ತೆ , ನಾವು ಸೆಳೆದುಕೊಂಡ ಆಕ್ಸಿಜನ್ ಇಲ್ಲಿಂದಾನೆ ರಕ್ತದಲ್ಲಿ ಬೆರೆಯುತ್ತೆ.
ಇನ್ನು ಈಗ ಒಂದು ಮುಖ್ಯವಾದ ವಿಷಯವನ್ನು ತಿಳಿದುಕೊಳ್ಳೋಣ ಅದೇನು ಅಂದ್ರೆ ನಮ್ಮ ಅನುಮತಿ ಇಲ್ಲದೆ ನಿರಂತರವಾಗಿ ಉಸಿರಾಟ ಹೇಗೆ ನಡಿತಾ ಇದೆ ಅಂತ ನೋಡೋಣ - ನಮ್ಮ ಸ್ವಾಶಕೋಶಗಳು ತನ್ನಷ್ಟಕ್ಕೆ ತಾನೇ ಉಬ್ಬುವುದು ಕುಗ್ಗುವುದು ಮಾಡೋದಿಲ್ಲ ,ಲಂಗ್ಸ್ ಕೆಳಗೆ ಡಯಾ ಫ್ರಮ್ ಅನ್ನೋ ಒಂದು ಅವಯವ ಇರುತ್ತೆ ಅದು ಮೇಲಕ್ಕೆ ಮೂವ್ ಆದಾಗ ಶ್ವಾಸಕೋಶಗಳನ್ನು ಹತ್ತಿರಕ್ಕೆ ಪುಶ್ ಮಾಡಿ ಲಂಗ್ಸ್ ನಿಂದ ಗಾಳಿ ಹೊರ ಹೋಗುತ್ತೆ . ಮತ್ತೆ ಡಯಾ ಫ್ರಮ್ ಕೆಳಗೆ ಬಂದಾಗ ಶ್ವಾಸಕೋಶಗಳು ವಿಶಾಲವಾಗುವುದರಿಂದ ಹೊರಗಿನಿಂದ ಗಾಳಿ ಒಳಗೆ ಬರುತ್ತೆ ಈ ರೀತಿಯಾಗಿ ನಾವು ಉಸಿರನ್ನು ಸೆಳೆದುಕೊಳ್ಳುವುದು ಹೊರಬಿಡುವುದು ನಡೆಯುತ್ತೆ ನಮ್ಮ ಬ್ರೈನ್ ನಲ್ಲಿರುವ autonomic nervous system ಅನ್ನೋದು ನಮ್ಮ ಇನ್ವಾಲ್ವ್ಮೆಂಟ್ ಇಲ್ಲದೇನೆ ಈ ಡಯಾ ಫ್ರಮ್ ಅನ್ನೋದನ್ನು ಮೇಲೆ ಕೆಳಗೆ ಆಗೋ ರೀತಿ ಮಾಡುತ್ತೆ ಇದರಿಂದ ನಿರಂತರವಾಗಿ ನಮ್ಮ ಉಸಿರಾಟ ಮುಂದುವರೆಯುತ್ತಲೇ ಇರುತ್ತೆ ಹೊರಗಿನ ವಾತಾವರಣದಲ್ಲಿ ಆಕ್ಸಿಜನ್ ಲೆವೆಲ್ ಎಷ್ಟರ ಮಟ್ಟಿಗೆ ಇದೆ , ಆ ಸಮಯದಲ್ಲಿ ನಾವು ಯಾವ ಕೆಲಸವನ್ನು ಮಾಡುತ್ತಿದ್ದೇವೆ ಆಗ ನಮ್ಮ ದೇಹಕ್ಕೆ ಎಷ್ಟು ಆಕ್ಸಿಜನ್ ಬೇಕು ಅನ್ನೋ ಆಧಾರದ ಮೇಲೆ ನಾವು ಎಷ್ಟು ವೇಗವಾಗಿ ಉಸಿರಾಟ ಆಡಬೇಕು ಅನ್ನೋದನ್ನ ನಮ್ಮ ಮೆದುಳಿ ನಿರ್ಧಾರ ಮಾಡುತ್ತೆ , ಈ ರೀತಿ ಸಾಧಾರಣವಾಗಿ ಒಬ್ಬ ಮನುಷ್ಯ ಒಂದು ದಿನಕ್ಕೆ ಸುಮಾರು 17000 ದಿಂದ 23,000 ಬಾರಿ ಉಸಿರಾಟವನ್ನು ಆಡ್ತಾನೆ.
ಈಗ ನಾವು ಉಸಿರಾಡಿದ ಗಾಳಿ ಒಳಗೆ ಹೋಗಿ ಹೊರಗೆ ಬರುವವರೆಗೂ ಏನು ನಡೆಯುತ್ತೆ ಅಂತ ನೋಡೋಣ.
ನಾವು ಒಂದು ಬಾರಿ ಗಾಳಿಯನ್ನು ಸೆಳೆದುಕೊಂಡರೆ ಸುಮಾರು 100 ಕ್ವಿಂಟಲಿಯನ್ ಆಕ್ಸಿಜನ್ ಮಾಲಿಕ್ಯುಲ್ಸ್ ನಮ್ಮ ಲಂಗ್ಸ್ ಒಳಗೆ ಹೋಗುತ್ತೆ ಈ ರೀತಿ ನಾವು ಸೆಳೆದುಕೊಂಡ ಗಾಳಿ ಮೂಗಿನ ಒಳಗೆ ಹೋಗಿ ವಿಂಡ್ ಪೈಪ್ ಮುಖಾಂತರ ಪ್ರಯಾಣಿಸಿ ಬ್ರೋnಕೈ ಒಳಗೆ ಹೋಗುತ್ತೆ ,ಈ ಮಾರ್ಗದ ಒಳಗೆ ಸ್ವಲ್ಪ ಮಟ್ಟಿಗೆ ತೇವದಿಂದ ಇರುವ ಮ್ಯೂ ಕಸ್ ನಿಂದ ಇರುವ ಸಿಲಿಯಾ ಎನ್ನುವ ಕೂದಲು ಇರುತ್ತೆ ಇವು ಶ್ವಾಸಕೋಶಗಳಿಗೆ ಅಪಾಯವನ್ನ ತರುವ ಧೂಳು ಯಾವುದಾದರು ಕ್ರಿಮಿ ಕೀಟಗಳು ಇದ್ರೆ ಇದಕ್ಕೆ ಅಂಟಿಕೊಳ್ಳುತ್ತದೆ ಆನಂತರ ನಮಗೆ ಕೆಮ್ಮು ಬಂದಾಗ ಅದರ ವೇಗಕ್ಕೆ ಇದಕ್ಕೆ ಅಂಟಿಕೊಂಡಿರುವ ಧೂಳು ಕ್ರಿಮಿ ಕೀಟಗಳು ಹೊರಬರುತ್ತೆ.
ಮತ್ತೆ ಇಲ್ಲಿಂದ ಗಾಳಿ ಅನ್ನೋದು ಲಂಗ್ಸ್ ನ ಕೊನೆಯಲ್ಲಿರುವ alveoli ಆಲ್ ವಿಯೋ ಲೈ ಎಂಬ ಗಾಳಿ ಉಂಡೆಗಳಿಗೆ ಸೇರಿಕೊಳ್ಳುತ್ತೆ , ಈ ಗಾಳಿ ಉಂಡೆಗಳಿಗೆ ತುಂಬಾ ಸಣ್ಣನೆಯ ಪೊರೆ ಇರುತ್ತೆ ಇವುಗಳಿಗೆ ಹೊರಗಡೆ ಇರುವ ರಕ್ತನಾಳಗಳಲ್ಲಿ ರಕ್ತ ಚಲಿಸುತ್ತಾ ಇರುತ್ತೆ ಈಗ ನಾವು ಉಸಿರಾಡಿದ ಆಕ್ಸಿಜನ್ ಈ ಪೊರೆಗಳ ಮುಖಾಂತರ ಪ್ರಯಾಣಿಸಿ ಕೆಂಪು ರಕ್ತ ಕಣಗಳಲ್ಲಿ ಬೆರೆಯುತ್ತೆ ನಮ್ಮ ದೇಹ ಅನ್ನೋದು ಕೆಲವು ಕೋಟಿ ಕಣಗಳಿಂದ ನಿರ್ಮಿಸಲ್ಪಟ್ಟಿದೆ . ಈರತ್ತ ನಮ್ಮ ದೇಹವೆಲ್ಲಾ ಪ್ರಯಾಣಿಸುತ್ತ ನಮ್ಮ ದೇಹದಲ್ಲಿರುವ ಪ್ರತಿ ಕಣಕ್ಕೂ ಈ ಆಕ್ಸಿಜನನ್ನು ತಲುಪಿಸುತ್ತೆ , ನಾವು ಯಾವ ಕೆಲಸ ಮಾಡಬೇಕೆಂದರು ಎನರ್ಜಿ ಬೇಕಲ್ವಾ , ಆ ಒಂದು ಎನರ್ಜಿ ಈ ಆಕ್ಸಿಜನ್ ಸಹದಿಂದಲೇ ತಯಾರಾಗುತ್ತೆ ,ಈಗ ಈ ಎನರ್ಜಿ ಹೇಗೆ ತಯಾರಾಗುತ್ತೆ ಅಂತ ನೋಡೋಣ ನಾವು ತಿಂದ ಆಹಾರ ಅನ್ನೋದು ಗ್ಲುಕೋಸ್ ಆಗಿ ಬದಲಾಗಿ ನಮ್ಮ ದೇಹದಲ್ಲಿರುವ ಪ್ರತಿ ಕಣಕ್ಕೂ ಸೇರಿಕೊಳ್ಳುತ್ತದೆ ಈ ಗ್ಲುಕೋಸ್ ಅನ್ನೋದು ನಮಗೆ ಬೇಕಾದ ಎನರ್ಜಿ ಯಾಗಿ ಬದಲಾಗಬೇಕು ಅಂದ್ರೆ ಅದಕ್ಕೆ ಆಕ್ಸಿಜನ್ ಬೇಕು ಈಗ ಪ್ರತಿ ಕಣದಲ್ಲಿರುವ ಮೈಟೋಕಾಂಡ್ರಿಯ ಅನ್ನೋದು ಈ ಆಕ್ಸಿಡೆಂಟ್ ಸಹಾಯದಿಂದ ಆ ಗ್ಲುಕೋಸನ್ನ ಎನರ್ಜಿ ಯಾಗಿ ಬದಲಾಯಿಸುತ್ತೆ ಇದನ್ನು ATP ಅಂತ ಕರೀತಾರೆ . ಈ ಎಟಿಪಿ ಬಗ್ಗೆ ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದು ಎನರ್ಜಿನಯನ್ನ ಸ್ಟೋರ್ ಮಾಡಿಕೊಳ್ಳುವ ಒಂದು ಬ್ಯಾಟರಿ ರೀತಿ ಈ ಪೂರ್ತಿ ಪ್ರಕ್ರಿಯೆಯನ್ನು Cellular respirationಅಂತ ಕರೆಯುತ್ತಾರೆ.
ಈ ಪ್ರಕ್ರಿಯೆ ನಡೆಯುವ ಕ್ರಮದಲ್ಲಿ ಕಾರ್ಬನ್ ಡೈಯಾಕ್ಸೈಡ್ ರಿಲೀಸ್ ಆಗುತ್ತೆ ,, ಇದು ವಿಷಪೂರಿತವಾದದ್ದು ಅದೇ ರೀತಿ ಇದರಿಂದ ನಮ್ಮ ದೇಹಕ್ಕೆ ಯಾವುದೇ ಯೂಸ್ ಇಲ್ಲ , ಆದ್ದರಿಂದ ಈ ರೀತಿ ಬಿಡುಗಡೆಯಾದ ಕಾರ್ಬನ್ ಡೈಯಾಕ್ಸೈಡ್ ಮತ್ತೆ ಕೆಂಪು ರಕ್ತ ಕಣಗಳ ಜೊತೆ ಪ್ರಯಾಣಿಸಿ ಆಲ್ ವಿಯೋ ಲೈಮುಖಾಂತರ ರಕ್ತದಿಂದ ಲಂಗ್ಸ್ ಗೆ ಸೇರಿಕೊಂಡು ಅಲ್ಲಿಂದ ನಾವು ಉಸಿರನ್ನು ಹೊರ ಬಿಟ್ಟಾಗ ಹೊರಗೆ ಹೋಗುತ್ತೆ ಈ ರೀತಿಯಾಗಿ ನಮ್ಮ ಶ್ವಾಸಕೋಶಗಳು ಕೆಲಸ ಮಾಡುತ್ತೆ.
ಉಸಿರಾಟ ಅನ್ನೋದು ತುಂಬಾ ಸಿಂಪಲ್ ಆಗಿ ಅಂತ ಅನಿಸಿದರೂ ಆದರೆ ಒಳಗಡೆ ನಡೆಯುವ ಪ್ರಕ್ರಿಯೆ ಮಾತ್ರ ತುಂಬಾ ಅದ್ಭುತವಾದದ್ದು....
ಕಾಮೆಂಟ್ ಪೋಸ್ಟ್ ಮಾಡಿ