ಪುನರ್ಜನ್ಮವನ್ನು ಸೂಚಿಸುವ ಗುರುತುಗಳು.....
ಈ ಪುನರ್ಜನ್ಮದ ಬಗ್ಗೆ ತಿಳ್ಕೊಬೇಕು ಅನ್ನೋ ಆಸಕ್ತಿ ಯಾವಾಗ ಬರುತ್ತೆ ಅಂದ್ರೆ ,ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ದೊಡ್ಡೋರು ಈ ರೀತಿ ಮಾತಾಡ್ತಿರ್ತಾರೆ ಹೋದ ಜನ್ಮದಲ್ಲಿ ಮಾಡಿದ ಪಾಪಗಳನ್ನ ಈ ಜನ್ಮದಲ್ಲಿ ಅನುಭವಿಸ್ತಿದ್ದೀವಿ ಅಂತ ಹೇಳ್ತಾರೆ , ಆಗ ಈ ಜನ್ಮದಲ್ಲಿ ಮಾಡಿದ ಪಾಪಗಳನ್ನ ಮುಂದಿನ ಜನ್ಮದಲ್ಲಿ ಅನುಭವಿಸಬೇಕು ಅಂತ ಆಲೋಚನೆ ಮಾಡ್ತೀವಿ , ಆದರೆ ನಮ್ಮಂತಹ ಸಾಮಾನ್ಯ ಮಾನವರಿಗೆ ಪುನರ್ಜನ್ಮದ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯನೇ ಆಗುವುದಿಲ್ಲ , ಆದರೆ ನಮ್ಮ ಹಿಂದೂ ಪುರಾಣ ಗ್ರಂಥಗಳಲ್ಲಿ ಬರೆದಿರುವ ಕೆಲವು ಪದ್ಧತಿಗಳ ಪ್ರಕಾರ ನಿಮಗೆ ಪುನರ್ಜನ್ಮ ಸಿಕ್ಕಿದಿಯಾ ಇಲ್ವಾ ಅಂತ ತಿಳಿದುಕೊಳ್ಳಬಹುದು. ಅಂದ್ರೆ ನೀವು ನಿಮ್ಮ ಹಿಂದಿನ ಜನ್ಮದಲ್ಲಿ ಏನ್ ಮಾಡ್ತಿದ್ರಿ ? ಹೇಗಿದ್ದೀರಿ ನೀವು ಯಾವ ಪಾಪ ಮಾಡಿದ್ರಿ ? ಇಂತಹ ವಿಷಯಗಳನ್ನು ತಿಳಿದುಕೊಳ್ಳಬಹುದು , ಇವೆಲ್ಲ ನಮ್ಮ ಹಿಂದೂ ಪುರಾಣಗಳಲ್ಲಿರುವ ನಂಬಿಕೆಗಳು ಇವೆ ನಿಜ ಅಂತ ನಿರೂಪಿಸಲು ನಮ್ಮ ಹತ್ತಿರ ಯಾವುದೇ ಆಧಾರಗಳು ಇಲ್ಲ ಆದರೆ ಅದನ್ನ ನಂಬಿ ನಂಬಿ ನಾವು ಮುಂದೆ ಹೋದರೆ ಅದೇ ನಿಜ ಅಂತ ಅನ್ಸುತ್ತೆ.
ಪುನರ್ಜನ್ಮವನ್ನು ಸೂಚಿಸುವ ಸಂಕೇತಗಳು
- ಕನಸುಗಳು ಡ್ರೀಮ್ಸ್
ನಮ್ಮ ಜೀವನದಲ್ಲಿ ಕನಸುಗಳು ತುಂಬಾ ಮುಖ್ಯವಾದವು ಇವುಗಳಿಂದ ನಾವು ನಮ್ಮ ಪುನರ್ಜನ್ಮದ ಬಗ್ಗೆ ತಿಳಿದುಕೊಳ್ಳಬಹುದು ಅದು ಹೇಗೆ ಅಂತ ಈಗ ನೋಡೋಣ.
ಕೆಲವೊಂದು ಬಾರಿ ನಮ್ಮ ಕನಸುಗಳಲ್ಲಿ ನಮಗೆ ಪರಿಚಯವಿಲ್ಲದ ವ್ಯಕ್ತಿಗಳು ನಾವು ಎಂದು ಹೋಗಿರದ ಪ್ರದೇಶಗಳು ನಾವು ಎಂದು ನೋಡಿರದ ಕೆಲವು ವಸ್ತುಗಳು ಕಾಣಿಸುತ್ತೆ ಇದನ್ನು ಕೂಡ ನಾವು ಪುನರ್ಜನ್ಮದ ಸಂಕೇತದ ರೀತಿ ನೋಡಬಹುದು ಈ ಪರಿಚಯವಿಲ್ಲದ ವಸ್ತುಗಳು ಪ್ರದೇಶಗಳು ಮನುಷ್ಯರು ನಮ್ಮ ಕನಸಿನಲ್ಲಿ ಬರ್ತಿದ್ದಾರೆ ಅಂದ್ರೆ ಅವುಗಳ ಜೊತೆ ನಮ್ಮ ಸಂಬಂಧ ಕಳೆದ ಜನ್ಮದಲ್ಲಿ ನಡೆದಿದೆ ಅಂತ ಅರ್ಥ ನಮಗೆ ಒಂದೇ ಕನಸು ಮತ್ತೆ ಮತ್ತೆ ಬರುತ್ತಿದ್ದರೆ ಅದು ಕಳೆದ ಜನ್ಮಕ್ಕೆ ಸಂಬಂಧಪಟ್ಟ ಆಧಾರನೆ ಇರಬಹುದು.
2. Birthmarks ಜನ್ಮ ಗುರುತುಗಳು
ನಮಲ್ಲಿ ತುಂಬಾ ಜನಕ್ಕೆ ಹುಟ್ಟಿದಾಗಿನಿಂದ ದೇಹದ ಮೇಲೆ ಕೆಲವು ಮಚ್ಚೆಗಳು ಇರುತ್ತೆ, ಅವು ಗಾಯಗಳಿಂದ ಆದ ಮಚ್ಚೆಗಳು ಅಲ್ಲ ಈ ಮಚ್ಚೆಗಳಿಗೂ ಕೂಡ ನಮ್ಮ ಕಳೆದ ಜನ್ಮಕ್ಕೆ ಸಂಬಂಧ ಇರುತ್ತೆ ,ಗರುಡ ಪುರಾಣದ ಪ್ರಕಾರ ಯಾವ ಆತ್ಮಗಳು ನರಕದಲ್ಲಿ ಅವರ ಕರ್ಮಫಲಗಳನ್ನು ಅನುಭವಿಸಿ ಆನಂತರ ಮತ್ತೆ ಭೂಮಿ ಮೇಲೆ ಮನುಷ್ಯನ ರೂಪದಲ್ಲಿ ಜನಿಸುತ್ತಾರೋ ಅವರಲ್ಲಿ ಕೆಲವರ ದೇಹದ ಮೇಲೆ ಮಚ್ಚೆಗಳು ಇರುತ್ತೆ ಈ ಮಚ್ಚೆಗಳನ್ನು ನೋಡಿ ಕಳೆದ ಜನ್ಮದಲ್ಲಿ ಅವರು ಎಂತವರು ಅಂತ ತಿಳಿದುಕೊಳ್ಳಬಹುದು ಅಂತ ಕೆಲವರು ಹೇಳುತ್ತಾರೆ ಈ ವಿಷಯದ ಮೇಲೆ ವಿಜ್ಞಾನಿಗಳು ಕೂಡ ಒಂದು ಪರಿಶೋಧನೆ ಮಾಡುತ್ತಾರೆ ಸ್ಟೀವನ್ಸ್ ಅನ್ನೋ ಒಬ್ಬ ಮಾನಸಿಕ ವೈದ್ಯ ನೂರಾರು ಜನರ ಮೇಲೆ ಮಾಡಿದ ಪರಿಶೋಧನೆಯಲ್ಲಿ 35 ಜನರ ಮೇಲೆ ಕಳೆದ ಜನ್ಮದ ಮಚ್ಚೆಗಳು ಇವೆ ಅಂತ ಗೊತ್ತಾಗಿದೆ ಅವರಲ್ಲಿ ಕೆಲವರಿಗೆ ಅವರಿಗೆ ಗಾಯಗಳ ಕಾರಣದಿಂದ ಹಿಂದಿನ ಜನ್ಮದ ನೆನಪುಗಳು ಕೂಡ ಆಗ್ತಿತ್ತು , ಈ ರೀತಿ ಪರಿಶೋಧನೆಯಲ್ಲಿ ಒಬ್ಬ ಹುಡುಗ ಕಳೆದ ಜನ್ಮದಲ್ಲಿ ನನ್ನ ತಲೆಗೆ ಗಾಯ ಆದ ಕಾರಣ ಸತ್ತು ಹೋದೆ ಅಂತ ಹೇಳುತ್ತಾನೆ, ಒಂದು ಪರಿಶೋಧನೆ ಆ ಸಮಯದಲ್ಲಿ ಒಂದು ಸೆನ್ಸೇಶನ್ ನನ್ನ ಕ್ರಿಯೇಟ್ ಮಾಡುತ್ತೆ.
3. deja vu.
ನಿಮ್ಮಲ್ಲಿ ಯಾರಿಗಾದರೂ ಯಾವಾಗ್ಲಾದ್ರೂ ಈ ರೀತಿ ಅನಿಸಿದೆಯಾ ನಿಮಗೆ ಪರಿಚಯವಿಲ್ಲದ ಒಬ್ಬ ವ್ಯಕ್ತಿಯನ್ನು ನೋಡಿದಾಗ ಇವರನ್ನು ಹಿಂದೆ ಯಾವಾಗಲೂ ನೋಡಿದ್ದೇನೆ ಅಂತ ಅಥವಾ ಮೊದಲನೇ ಬಾರಿ ನೀವು ಯಾವುದಾದರೂ ಒಂದು ಸ್ಥಳಕ್ಕೆ ಹೋದಾಗ ಈ ಪ್ರದೇಶಕ್ಕೆ ಮೊದಲು ನಾನು ಬಂದಿದ್ದೀನಿ ಅಂತ ಅನಿಸಿದ್ದೀಯಾ , ಅಥವಾ ನಿಮ್ಮ ಜೀವನದಲ್ಲಿ ಎಂದು ನಡೆಯದ ಘಟನೆ ನಡೆದಾಗ ಇದು ಇದಕ್ಕಿಂತ ಮುಂಚೆ ಒಂದು ಬಾರಿ ನಡೆದಿದೆ ಅಂತ ಅನಿಸಿದ್ಯಾ , ಅಥವಾ ಯಾವುದಾದರೂ ಒಂದು ವಸ್ತುವನ್ನು ನೋಡಿದಾಗ ಇದನ್ನ ಎಲ್ಲೋ ನೋಡಿದ್ದೀನಿ ಅನ್ನೋ ಫೀಲಿಂಗ ಏನಾದ್ರು ಬಂದಿದ್ಯ ಈ ರೀತಿ ಅನಿಸಿದರೆ ಇದನ್ನು ನಾವು ದೇಜಾವು ಅಂತ ಕರೀತೀವಿ. ಇದನ್ನು ನೀವು ಯಾವತ್ತಾದರೂ ಅನುಭವಿಸಿದ್ದರೆ ಅದು ಎಷ್ಟರಮಟ್ಟಿಗೆ ಆಶ್ಚರ್ಯಕ್ಕೆ ಗುರಿ ಮಾಡುತ್ತೆ ಅಂದ್ರೆ ಅದನ್ನ ನಾವು ಕೂಡ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ ಈ ದೇಜಾವು ಮುಖಾಂತರ ಇಂದಿನ ಜನ್ಮದ ಸತ್ಯಗಳನ್ನ ಈ ಜನ್ಮದಲ್ಲಿ ಜ್ಞಾಪಕಗಳ ರೀತಿ ಅನುಭವಿಸುತ್ತಾರೆ ಅಂತ ಹೇಳುತ್ತಾರೆ.
4. Talent
ನಮ್ಮೆಲ್ಲರಿಗೂ ಯಾವುದೋ ಒಂದು ವಿಷಯದಲ್ಲಿ ಪ್ರತಿಭೆ ಅನ್ನೋದು ಇದ್ದೇ ಇರುತ್ತೆ ಈ ಒಂದು ಪ್ರತಿಭೆ ನಮಗೂ ಮತ್ತು ಬೇರೆಯವರಿಗೆ ಇರುವ ವ್ಯತ್ಯಾಸವನ್ನು ತಿಳಿಸುತ್ತೆ ಕೆಲವರು ಹಗಲು ರಾತ್ರಿ ಕಷ್ಟಪಟ್ಟು ತಮ್ಮಲ್ಲಿರುವ ಪ್ರತಿಭೆಯನ್ನು ತಿಳಿದುಕೊಂಡು ಅದನ್ನು ಹೊರ ತೆಗಿತಾರೆ ಇನ್ನೂ ಕೆಲವರು ಹುಟ್ಟಿದಾಗಲೇ ಪ್ರತಿಭೆಯಿಂದ ಹುಟ್ಟುತ್ತಾರೆ ಇದು ಹೇಗೆ ಸಾಧ್ಯ ಅಂದ್ರೆ ಇವರು ತಮ್ಮ ಪ್ರತಿಭೆಯನ್ನ ಹಿಂದಿನ ಜನ್ಮದಲ್ಲಿ ತುಂಬಾ ಕಷ್ಟಪಟ್ಟು ಸಾಧನೆ ಮಾಡಿಕೊಂಡು ಇರುತ್ತಾರೆ , ಇವರು ಇಂದಿನ ಜನ್ಮದ ರೀತಿನೇ ಈ ಜನ್ಮದಲ್ಲೂ ತುಂಬಾ ಆಸಕ್ತಿಯಿಂದ ಇರುತ್ತಾರೆ.
ಉದಾಹರಣೆಗೆ ಕೌಟಿಲ್ಯ ಪಂಡಿತ್ Kautilya Panditಅನ್ನೋ ಈ ಹುಡುಗ ಜ್ಞಾನ ಪರವಾಗಿ ಅಪಾರ ಮೆದಾವಿ , ಈ ಬಾಲಕನನ್ನ ಗೂಗಲ್ ಬಾಯ್ ಅಂತಾನೇ ಕರೀತಾರೆ , ತುಂಬಾ ಬಾರಿ ತುಂಬಾ ವೇದಿಕೆಗಳಲ್ಲಿ ತನ್ನ ಜ್ಞಾನವನ್ನು ಇವರು ನಿರೂಪಿಸಿಕೊಂಡಿದ್ದಾರೆ. ಅದೇ ರೀತಿ ತುಂಬಾ ಜನ ಚಿಕ್ಕ ಮಕ್ಕಳು ನಾವು ಯಾವ ಪ್ರಶ್ನೆ ಕೇಳಿದ್ರು ಉತ್ತರವನ್ನು ಕೊಡುತ್ತಾರೆ ಅವರು ಏನನ್ನ ಓದಿದ್ರು ಅದನ್ನ ಮರೆಯೋದೇ ಇಲ್ಲ , ಇವುಗಳನ್ನೆಲ್ಲ ನೋಡ್ತಿದ್ರೆ ಪುನರ್ಜನ್ಮ ಅನ್ನೋದು ನಿಜ ಅಂತ ಅನ್ಸುತ್ತೆ.
5. fear ಭಯ.
ಕೆಲವರಿಗೆ ತುಂಬಾ ಎತ್ತರಕ್ಕೆ ಹೋಗಬೇಕು ಅಂದ್ರು ಬೆಂಕಿ ಅಂದ್ರು ನೀರಂದ್ರು ತುಂಬಾ ಭಯ , ಆದರೆ ಅವರ ಜೀವನದಲ್ಲಿ ಇದಕ್ಕೆ ಭಯಪಡುವಂತಹ ಘಟನೆ ಯಾವತ್ತೂ ನಡೆದಿರುವುದಿಲ್ಲ , ಆದರೂ ಕೂಡ ಅವರು ಭಯ ಪಡ್ತಿರ್ತಾರೆ ಇದಕ್ಕೆ ಕಾರಣ ಏನು ಗೊತ್ತಾ ಇವರು ಭಯ ಪಡುವುದಕ್ಕೆ ಕಾರಣ ಅವರ ಕಳೆದ ಜನ್ಮ ಕಳೆದ ಜನ್ಮದಲ್ಲಿ ನೀರಿನಿಂದ ಆಗಲಿ ಅಥವಾ ಎತ್ತರದಲ್ಲಿ ಇದ್ದಾಗ ಆಗಲಿ ಅಥವಾ ಬೆಂಕಿಯಿಂದಾನು ಅವರಿಗೆ ಭಯಾನಕವಾದ ಅನುಭವ ಆಗಿರಬಹುದು ಅದು ಅವರನ್ನು ದಿಗ್ಭ್ರಾಂತಿಗೆ ಗುರಿ ಮಾಡಿರಬಹುದು, ಇದರಿಂದ ಈ ಜನ್ಮದಲ್ಲಿ ಅವುಗಳನ್ನು ನೋಡಿದಾಗ ಅಥವಾ ಹತ್ತಿರಕ್ಕೆ ಹೋದಾಗ ಕೆಲವೊಂದು ಬಾರಿ ಕಣ್ಣು ಕೂಡ ತಿರುಗುತ್ತೆ , ಇದೆಲ್ಲಾ ಕಳೆದ ಜನ್ಮದಲ್ಲಿ ಅವರಲ್ಲಿ ಹುಟ್ಟಿದ ಭಯ ಅದು ಈ ಜನ್ಮದಲ್ಲೂ ಕೂಡ ಅವರ ಹಿಂದೆನೇ ಇರುತ್ತೆ .....
ಈ ಪುನರ್ಜನ್ಮವನ್ನು ನಾವು ನಿರೂಪಿಸಲು ಸಾಧ್ಯವಾಗದೇ ಇರಬಹುದು ಆದರೆ ನಮ್ಮ ಹಿಂದೂ ಪುರಾಣಗಳ ಪ್ರಕಾರ ಕಾಲಚಕ್ರದಲ್ಲಿ ಇವು ಮುಂದೆ ಸಾಗುತ್ತಲೇ ಇರುತ್ತೆ ಅವುಗಳಲ್ಲಿ ನಾವು ಒಂದು ಭಾಗವಾಗಿ ಮುಂದೆ ಹೋಗ್ತಾನೆ ಇರ್ತೀವಿ ಕೆಲವೊಂದು ಬಾರಿ ನಮ್ಮ ಜೀವನದಲ್ಲಿ ನಡೆಯುವ ವಿಷಯಗಳನ್ನು ಗಮನಿಸಿದರೆ ಈ ಪುನರ್ಜನ್ಮ ನಿಜ ಅಂತಾನೇ ಅನ್ಸುತ್ತೆ, ಇದರ ಬಗ್ಗೆ ನೀವೇನಂತೀರಾ ನಿಮ್ಮ ಅಭಿಪ್ರಾಯವನ್ನು ಖಂಡಿತ ಕಾಮೆಂಟ್ ಮಾಡಿ...
ಕಾಮೆಂಟ್ ಪೋಸ್ಟ್ ಮಾಡಿ